ತುಂಬೆತ್ತಡ್ಕ ಕೃಷ್ಣಪ್ಪ ಆಚಾರ್ಯ ನಿಧನ

0

ಮರ್ಕಂಜ ಗ್ರಾಮದ ತುಂಬೆತ್ತಡ್ಕ ಕೃಷ್ಣಪ್ಪ ಆಚಾರ್ಯ ಎಂಬವರು ಮಾ.25ರಂದು ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಸುಮತಿ, ಪುತ್ರಿಯರಾದ ವಾಗೀಶ್ವರೀ, ಜ್ಯೋತಿ, ವಿಜಯಲಕ್ಷ್ಮಿ ಮತ್ತು ಪುತ್ರ ಮರ್ಕಂಜ ಅಂಚೆ ಪಾಲಕರಾಗಿರುವ ಅರುಣಪ್ರಕಾಶ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಕೃಷ್ಣಪ್ಪ ಆಚಾರ್ಯರವರು ಸುಳ್ಯ ಮತ್ತು ಮರ್ಕಂಜದಲ್ಲಿ ಟೈಲರ್ ವೃತ್ತಿ ಮಾಡುತ್ತಿದ್ದರು. ಅಲ್ಲದೇ ಟೈಲರ್ ಅಸೋಸಿಯೇಷನ್ ನಲ್ಲಿಯೂ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.