ಭಾರತೀಯ ಕೈಗಾರಿಕೆಗಳ ಒಕ್ಕೂಟದ ಸುಸ್ಥಿರ ಅಭಿವೃದ್ಧಿ ಕೇಂದ್ರವು ವಿವಿಧ ಕೈಗಾರಿಕೆಗಳಿಗೆ ರಾಷ್ಟ್ರೀಯ ಸುಸ್ಥಿರ ಅಭಿವೃದ್ಧಿ ಪ್ರಶಸ್ತಿಯನ್ನು ನೀಡುತ್ತಿದ್ದು ಈ ಪ್ರಶಸ್ತಿಗಾಗಿ ನಡೆಯುವ ಮೌಲ್ಯ ಮಾಪನಕ್ಕಾಗಿ ವಿವಿಧ ಕ್ಷೇತ್ರಗಳ ತಜ್ಞರ ತಂಡಗಳನ್ನು ರಚಿಸಲಾಗಿದೆ. ಈ ಒಂದು ತಂಡದ ನಾಯಕನಾಗಿ ಜಗದೀಶ್ ಪಿ.ಎಸ್. ಮುಳ್ಯರವರು ಕಾರ್ಯನಿರ್ವಹಿಸುತ್ತಿದ್ದು, ೨೦೨೩ – ೨೪ ರ ಅವಧಿಯ ಸುಸ್ಥಿರ ಅಭಿವೃದ್ಧಿ ಪ್ರಶಸ್ತಿಗಾಗಿ ನಡೆದ ವಿವಿಧ ಕಂಪೆನಿಗಳ ಕೈಗಾರಿಕೆಗಳ ಮೌಲ್ಯಮಾಪನದ ತಂಡವನ್ನು ಮುನ್ನಡೆಸಿದ್ದಕ್ಕಾಗಿ ಜಗದೀಶ್ ಮುಳ್ಯರಿಗೆ ಉತ್ತಮ ತಂಡ ನಾಯಕ (ಬೆಸ್ಟ್ ಟೀಮ್ ಲೀಡರ್) ಪ್ರಶಸ್ತಿಯನ್ನು ಭಾರತೀಯ ಕೈಗಾರಿಕೆಗಳ ಒಕ್ಕೂಟ ನೀಡಿದೆ.
ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಐಟಿಸಿ ಕಂಪೆನಿಯ ಅಧ್ಯಕ್ಷರಾದ ಸಂಜೀವ್ ಪುರಿ ಯವರು ಪ್ರಶಸ್ತಿಯನ್ನು ನೀಡಿ ಗೌರವಿಸಿದರು.
ಜಗದೀಶ್ ರವರು ಪುಣೆಯ ಸಿಂಜೆಂಟಾ ಕಂಪೆನಿಯ ಸುಸ್ಥಿರ ಅಭಿವೃದ್ಧಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಜ್ಜಾವರ ಗ್ರಾಮದ ಮುಳ್ಯ ನಿವೃತ್ತ ಅಧ್ಯಾಪಕ ಶೇಷಪ್ಪ ಗೌಡ ಹಾಗೂ ಶ್ರೀಮತಿ ಲಲಿತಾ ದಂಪತಿಗಳ ಪುತ್ರ. ಅಜ್ಜಾವರ ಗ್ರಾ.ಪಂ. ಸದಸ್ಯ ವಿಶ್ವನಾಥ ಮುಳ್ಯಮಠರವರ ಸಹೋದರ.