ಆಲೆಟ್ಟಿ ಗ್ರಾಮದ ಉಳಿಯ ಪರಿವಾರ ಕುಟುಂಬದ ತರವಾಡು ದೈವಸ್ಥಾನದಲ್ಲಿ ಶ್ರೀ ವೆಂಕಟರಮಣ ದೇವರ ಹರಿಸೇವೆ ಹಾಗೂ ಶ್ರೀ ವಿಷ್ಣುಮೂರ್ತಿ ಹಾಗೂ ಶ್ರೀ ಧರ್ಮ ದೈವ ಮತ್ತು ಉಪದೈವಗಳ ಧರ್ಮನಡಾವಳಿಯು ಮಾ.30 ಮತ್ತು31ರಂದು ಜರುಗಿತು.
ಮಾ.30 ರಂದು ಬೆಳಗ್ಗೆ ಶ್ರೀ ವೆಂಕಟರಮಣ ದೇವರ ಹರಿಸೇವೆಯಾಗಿ ಅದೇ ದಿನ ಸಂಜೆ ಅರಂಬೂರು ಮನೆತನದ ಕುದ್ಕುಳಿಯಲ್ಲಿರುವ
ಶ್ರೀ ವಿಷ್ಣುಮೂರ್ತಿ ದೈವಸ್ಥಾನದಿಂದ ವಿಷ್ಣುಮೂರ್ತಿ ದೈವದ ಪಾತ್ರಿ ರಾಮ ಮಣಿಯಾಣಿ ಆಲೆಟ್ಟಿ ಯವರ ನೇತೃತ್ವದಲ್ಲಿ ದೈವದ ಭಂಡಾರ ಆಗಮಿಸಿ ಶ್ರೀ ವಿಷ್ಣುಮೂರ್ತಿ ದೈವದ ತೊಡಂಞಲ್ ನೆರವೇರಿತು. ಬಳಿಕ ಶ್ರೀ ವಿಷ್ಣುಮೂರ್ತಿ ದೈವದ ಕುಲ್ಚಾಟವಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.
ರಾತ್ರಿಶ್ರೀಗುರುಕಾರ್ನೋರು ದೈವ, ಸತ್ಯದೇವತೆ, ಪಿಲಿಭೂತ, ವರ್ಣಾರ ಪಂಜುರ್ಲಿ, ಕುಪ್ಪೆ ಪಂಜುರ್ಲಿ ದೈವಗಳ ಕೋಲವು ಜರುಗಿತು. ಮರುದಿನ ಬೆಳಗ್ಗೆ ಶ್ರೀ ವಿಷ್ಣುಮೂರ್ತಿ ದೈವ ಹಾಗೂ ರುದ್ರಚಾಮುಂಡಿ ಮತ್ತು ಪಾಷಾಣಮೂರ್ತಿ ದೈವಗಳ ನಡಾವಳಿಯು ನಡೆಯಿತು. ಮಧ್ಯಾಹ್ನ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯು ನಡೆಯಿತು.
ಪರಿವಾರ ಕುಟುಂಬದ ಯಜಮಾನರು ಹಾಗೂ ಹಿರಿಯರು, ಕಿರಿಯ ಸದಸ್ಯರು ಎಲ್ಲರನ್ನೂ ಸ್ವಾಗತಿಸಿದರು.ಉಳಿಯ
ಪರಿವಾರ ಲಕ್ಷ್ಮಣ ಗೌಡ ಮತ್ತು ಸಹೋದರರು ಸಹಕರಿಸಿದರು. ಗ್ರಾಮದ ಮತ್ತು ಪರ ಊರಿನ ಭಕ್ತಾದಿಗಳು ಆಗಮಿಸಿ ಪ್ರಸಾದ ಸ್ವೀಕರಿಸಿದರು.