ಕಾಳಪುಲಿಯನ್, ಪುಲಿಕಂಡನ್ , ಆಯರ್ ಭಗವತಿ , ಪುಲ್ಲೂರುಕಾಳಿ – ಪುಲ್ಲೂರು ಕಣ್ಣನ್ ಹಾಗೂ ವಿಷ್ಣುಮೂರ್ತಿ ದೈವದ ಕೋಲ
ಪೆರಾಜೆ ಶ್ರೀ ಶಾಸ್ತಾವು ಸನ್ನಿಧಿಯಲ್ಲಿ ಕಾಲಾವಧಿ ಜಾತ್ರೋತ್ಸವವು ಜರುಗುತ್ತಿದ್ದು, ಇಂದು ಅಪರಾಹ್ನ ಇತಿಹಾಸ ಪ್ರಸಿದ್ಧ ಶ್ರೀ ಭಗವತಿ ದೊಡ್ಡಮುಡಿ ಉತ್ಸವವು ಜರುಗಲಿದೆ.
ನಿನ್ನೆ ಬೆಳಿಗ್ಗೆ ಕಾಳ ಪುಲಿಯನ್ ಮತ್ತು ಪುಲಿಕಂಡನ್ ದೈವಗಳ ಕೋಲ, ಬೇಟೆ ಕರಿಮಗನ್ ಈಶ್ವರನ್ ದೈವದ ಕೋಲ, ಮಧ್ಯಾಹ್ನ ಅನ್ನಸಂತರ್ಪಣೆ ಜರುಗಿತು. ರಾತ್ರಿ ಭಗವತಿ ದೇವಿ ಸಮಾರಾಧನೆ, ಪುಲ್ಲೂರು ಕಣ್ಣನ್ ದೈವದ ಬೆಳ್ಳಾಟ, ತುಳು ಕೋಲಗಳ ಬೆಳ್ಳಾಟ, ಮಲೆಕಾರಿ ಬೆಳ್ಳಾಟ, ಶ್ರೀ ವಿಷ್ಣುಮೂರ್ತಿ ದೈವದ ತೊಡಂಙಲ್, ರಕ್ತೇಶ್ವರಿ ದೈವದ ತೊಡಂಙಲ್, ಪೊಟ್ಟನ್ ದೈವದ ತೊಡಂಙಲ್, ಬೇಟೆ ಕರಿಮಗನ್ ದೈವದ ಬೆಳ್ಳಾಟ ಜರುಗಿ, ಭಗವತಿ ಕಲಶ ತಂದು, ಭಗವತಿ ತೋಟ್ಟಂ, ಆಯರ್ ಭಗವತಿ ತೋಟ್ಟಂ, ಪುಲ್ಲೂರುಕಾಳಿ ತೋಟ್ಟಂ, ತುಳುಕೋಲಗಳು ಮತ್ತು ಮಲೆಕ್ಕಾರಿ ತಿರುವಪ್ಪಗಳು ಜರುಗಿತು.
ಇಂದು ಬೆಳಿಗ್ಗೆ ಪೊಟ್ಟನ್ ದೈವದ ಕೋಲ, ರಕ್ತೇಶ್ವರಿ ಹಾಗೂ ಆಯರ್ ಭಗವತಿ ದೈವಗಳ ಕೋಲ ನಡೆಯಿತು. ಪುಲ್ಲೂರು ಕಾಳಿ, ಪುಲ್ಲೂರು ಕಣ್ಣನ್, ಶ್ರೀ ವಿಷ್ಣುಮೂರ್ತಿ ದೈವದ ಕೋಲ ನಡೆಯುತ್ತಿದೆ.
ಈ ಸಂದರ್ಭದಲ್ಲಿ ದೇವಸ್ಥಾನದ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.