ಇಂದು ಗೊನೆ ಮೂಹೂರ್ತ
ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳಿಗೊಳಪಟ್ಟ ಪಂಚಸ್ಥಾಪನೆಗಳಲ್ಲಿ ಒಂದಾದ ಕಾವೂರು ಶ್ರೀ ಮಹಾವಿಷ್ಣು ದೇವರ ಜಾತ್ರೋತ್ಸವವು ಎ.1ರಿಂದ ಎ.29ರವರೆಗೆ ವಿವಿಧ ಧಾರ್ಮಿಕ ಹಾಗೂ ದೈವಗಳಿಗೆ ನೇಮೋತ್ಸವದೊಂದಿಗೆ ನಡೆಯಲಿದ್ದು, ಇಂದು ಮುಹೂರ್ತದ ಗೊನೆ ಕಡಿಯುವ ಕಾರ್ಯಕ್ರಮ ನಡೆಯಿತು.
ದೇವಾಲದ ಪ್ರಧಾನ ಅರ್ಚಕ ರಾಮಕೃಷ್ಣ ಮಯ್ಯ ಮತ್ತು ಉಳ್ಳಾಕುಳ ಟೊಪ್ಪಿ ಪೂಜಾರಿ ರವಿರಾಮ ರೈಯವರ ನೇತೃತ್ವದಲ್ಲಿ ಗೊನೆ ಮುಹೂರ್ತ ನಡೆಸಲಾಯಿತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಘವ ಗೌಎ ಕಂಜಿಪಿಲಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಸೇವಾ ಸಮಿತಿ ಅಧ್ಯಕ್ಷ ರಾಮಚಂದ್ರ ಹಲ್ದಡ್ಕ, ಭಜನಾ ಮಂಡಳಿ ಅಧ್ಯಕ್ಷ ಯತೀಶ್ ಕಂಜಿಪಿಲಿ, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಗಿರೀಶ್ ನಾರ್ಕೋಡು, ಹಾಗೂ ದೇವಾಲಯದ ಧನಂಜಯ ಬಲ್ಕಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಕಮಾಲಕ್ಷ ಗೌಡ ಪುರ, ರಾಜೇಶ್ವರಿ ಕುಮಾರಸ್ವಾಮಿ ರೆಂಜಾಳ, ಧರ್ಮಪಾಲ ಸುಳ್ಳಿ, ಚೆನ್ನಕೇಶವ ದೋಳ ಹಾಗೂ ಬೈಲುವಾರು ಮುಖ್ಯಸ್ಥರುಗಳು, ದೇವಾಲಯಕ್ಕೆ ಸಂಬಂಧಪಟ್ಟ ವಿವಿಧ ಚಾಕರಿಯವರು ಉಪಸ್ಥಿತರಿದ್ದರು.
ಇಂದಿನಿಂದ ಉಭಯ ಗ್ರಾಮಗಳಲ್ಲಿ ಸಂಪ್ರದಾಯದ ಪ್ರಕಾರ ಎ.1ರಿಂದ ಎ.29ರವರೆಗೆ ಯಾವುದೇ ಶುಭ ಕಾರ್ಯಗಳು ನಡೆಯುವಂತಿಲ್ಲ.
ಎ.6ರಂದು ಬೆಳಿಗ್ಗೆ ಶಿರಾಡಿ ಯಾನೆ ರಾಜಂ ದೈವದ ಭಂಡಾರ ಬರುವುದು, ಬಳಿಕ ಉಗ್ರಾಣ ತುಂಬಿಸಿ ನಂತರ ಧ್ವಜಾರೋಹಣ ನಡೆಯಲಿದೆ.