ಸ್ಪರ್ಧಾತ್ಮಕ ಮತ್ತು ಪ್ರವೇಶ ಪರೀಕ್ಷೆಗಳು / ವಿದ್ಯಾರ್ಥಿವೇತನಗಳಿಗಾಗಿ ವಿದ್ಯಾಮಾತಾ ಅಕಾಡೆಮಿಯಲ್ಲಿ ರಜಾ ದಿನಗಳ ತರಬೇತಿ ಶಿಬಿರ

0

ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯು 5ನೇ ತರಗತಿ ವಿದ್ಯಾರ್ಥಿಗಳಿಂದ ಪಿಯುಸಿ ವರೆಗಿನ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯಕೊಂದು ಅಡಿಗಲ್ಲು ಹಾಕುವ ನಿಟ್ಟಿನಲ್ಲಿ ವಿಶಿಷ್ಟವಾದ ತರಬೇತಿ ಶಿಬಿರವನ್ನು ಆಯೋಜಿಸುತ್ತಿದೆ.ನವೋದಯ /ಸೈನಿಕ್ / ಆದರ್ಶ / ಮೊರಾರ್ಜಿ / ಒಲಂಪಿಯಾಡ್ ಪ್ರವೇಶ ಪರೀಕ್ಷೆಗಳು ಮತ್ತು ಜೆಇಇ / ನೀಟ್ / ಎನ್ ಡಿ ಎ / ಕ್ಲಾಟ್ / ಎನ್.ಎಂ.ಎಂ.ಎಸ್ / ಕೆ.ಎ.ಎಸ್ / ಐ.ಎ.ಎಸ್ ವರೆಗಿನ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ರಿಲಯನ್ಸ್ / ಗೂಗಲ್ / ಬಿರ್ಲಾ / ಇಂಟ್ಯೂಟ್ / ಇನ್ಫೋಸಿಸ್ / ಕೋಟಕ್ ಸುರಕ್ಷಾ / ಒ.ಎನ್.ಜಿ.ಸಿ / ಕೊಡೆನ್ಸ್ ವಿದ್ಯಾರ್ಥಿವೇತನಗಳ ಪರೀಕ್ಷೆಗಳನ್ನು ಗಮನದಲ್ಲಿರಿಸಿಕೊಂಡು ಸಂಪೂರ್ಣವಾಗಿ ಚಿಕ್ಕಂದಿನಿಂದಲೇ ವಿದ್ಯಾರ್ಥಿಗಳನ್ನು ತಯಾರು ಮಾಡುವ ಯೋಜನೆಯೊಂದಿಗೆ ಈ ತರಬೇತಿ ಶಿಬಿರವನ್ನು ಏಪ್ರಿಲ್ 21ರಿಂದ ಮೇ 21 ರವರೆಗೆ ವಿದ್ಯಾಮಾತಾ ಅಕಾಡೆಮಿಯ ಪುತ್ತೂರು ಮತ್ತು ಸುಳ್ಯ ತರಬೇತಿ ಕೇಂದ್ರಗಳಲ್ಲಿ ಬೆಳಗ್ಗೆ 10:00ರಿಂದ ಮಧ್ಯಾಹ್ನ 3:00 ರವರಿಗೆ (ವಾರದ 5 ದಿನ) ನುರಿತ ತರಬೇತುದಾರರ ನೇತೃತ್ವದಲ್ಲಿ ನಡೆಸಲಾಗುತ್ತದೆ.

ಈಗಾಗಲೇ ಪ್ರವೇಶಾತಿಯನ್ನು ಪ್ರಾರಂಭಿಸಲಾಗಿದ್ದು ಆಸಕ್ತ ವಿದ್ಯಾರ್ಥಿಗಳು ವಿದ್ಯಾಮಾತಾ ಅಕಾಡೆಮಿಯ ತರಬೇತಿ ಕೇಂದ್ರದಲ್ಲಿ ಆಧಾರ್ ಪ್ರತಿ ಹಾಗೂ ಪಾಸ್ಪೋರ್ಟ್ ಸೈಜ್ ಫೋಟೋ ನೀಡಿ ಹೆಸರನ್ನು ನೋಂದಾಯಿಸಬೇಕಾಗಿದೆ.ಹೆಚ್ಚಿನ ಮಾಹಿತಿಗಾಗಿ :ಪುತ್ತೂರು ಕಛೇರಿ :ವಿದ್ಯಾಮಾತಾ ಅಕಾಡೆಮಿ, ಹಿಂದೂಸ್ತಾನ್ ಕಾಂಪ್ಲೇಕ್ಸ್, ಎಪಿಯಂಸಿ ರಸ್ತೆ, ಪುತ್ತೂರು. ದ.ಕಫೋನ್ ನಂ. : 9148935808 / 9620468869

ಸುಳ್ಯ ಕಛೇರಿ :
ವಿದ್ಯಾಮಾತಾ ಅಕಾಡೆಮಿ ,ಟಿ.ಎ.ಪಿ.ಸಿ.ಎಂ.ಎಸ್ ಬಿಲ್ಡಿಂಗ್ ಕಾರ್ ಸ್ಟ್ರೀಟ್ ಸುಳ್ಯ ದ.ಕ 574239
PH: 9448527606