ಅಪಾರ ಪ್ರಮಾಣದ ಕೃಷಿಬೆಳೆ ಹಾನಿ
ಮುರೂರು, ಕೇನಾಜೆ ಪರಿಸರದಲ್ಲಿದ್ದ ಸುಮಾರು ಎಂಟು ಕಾಡಾನೆಗಳ ಹಿಂಡು ಎ.4ರಂದು ಬೆಳಿಗ್ಗೆ ಪಂಜಿಕಲ್ಲಿನಲ್ಲಿ ರಸ್ತೆ ದಾಟಿ ಸಮೀಪದ ಬೆಳ್ಳಿಪ್ಪಾಡಿ ಕಾಡಿನಲ್ಲಿದೆ ಎಂದು ತಿಳಿದುಬಂದಿದೆ.
ಬೆಳಿಗ್ಗೆ ಜಾಲ್ಸೂರು ಗ್ರಾಮದ ಮಹಾಬಲಡ್ಕ ಗಡಿ ಪರಿಸರದಲ್ಲಿದ್ದ ಒಟ್ಟು ಎಂಟು ಕಾಡಾನೆಗಳು ಪಯಸ್ವಿನಿ ನದಿಯಾಗಿ ಸಂಚರಿಸಿ, ಮುಖ್ಯರಸ್ತೆ ದಾಟಿ ಇದೀಗ ದೇಲಂಪಾಡಿ ಗ್ರಾಮದ ಮೆನ್ನಾ ಎಂಬಲ್ಲಿ ಕಾಡಿನಲ್ಲಿ ಬೀಡು ಬಿಟ್ಟಿರುವುದಾಗಿ ತಿಳಿದುಬಂದಿದೆ.
ಕಾಡಾನೆಗಳು ಗುಂಪಾಗಿ ಬಂದುದರಿಂದ ಮಹಾಬಲಡ್ಕ, ಪಂಜಿಕಲ್ಲು ಹಾಗೂ ಬೆಳ್ಳಿಪ್ಪಾಡಿ ಪರಿಸರದಲ್ಲಿ ಕೃಷಿಕರ ಕೃಷಿ ತೋಟಗಳಿಗೆ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಕೃಷಿ ನಾಶಗೊಂಡಿರುವುದಾಗಿ ತಿಳಿದುಬಂದಿದೆ.