ಐವರ್ನಾಡು ಗ್ರಾಮದ ಜಾನಕಿ ದೊಡ್ಡಮನೆ ಚೀಮುಳ್ಳು ಅಲ್ಪಾವಧಿಯ ಅಸೌಖ್ಯತೆಯಿಂದ ಏ. 2 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ರವೀಂದ್ರ, ಪುತ್ರಿಯರಾದ ಶ್ರೀಮತಿ ಶಕುಂತಲಾ ರಾಧಾಕೃಷ್ಣ ಮಂಡೆಕೋಲು, ಶ್ರೀಮತಿ ದೇವಕಿ ದಯಾನಂದ ಕುಂಬ್ಲಾಡಿ, ಶ್ರೀಮತಿ ಜಯಂತಿ ವಸಂತ ಅನಿಲ ಗುಂಡ್ಯ, ಶ್ರೀಮತಿ ಪುಷ್ಪಲತಾ ಮೋಹನ್ ಕುಮಾರ್ ಕಜೆಮೂಲೆ, ಸೊಸೆ ಶ್ರೀಮತಿ ಚಂದ್ರಿಕಾ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.