ಮತದಾನ ಜಾಗೃತಿಗಾಗಿ ಸುದ್ದಿ ಮತದಾರರ ಕಡೆಗೆ

0

ಬೆಳ್ಳಾರೆಯಲ್ಲಿ ” ಸುದ್ದಿ ಚುನಾವಣಾ ಕುರುಕ್ಷೇತ್ರ “

ರಾಜಕೀಯ ನಾಯಕರಿಂದ ಅಭಿವೃದ್ಧಿ ಕೆಲಸಗಳು, ಬೇಡಿಕೆಗಳ ಪ್ರಸ್ತಾಪ

ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾನ ಜಾಗೃತಿಗಾಗಿ ಸುದ್ದಿಯ ವತಿಯಿಂದ “_ಚುನಾವಣಾ ಕುರುಕ್ಷೇತ್ರ ” ಎಂಬ ವಿನೂತನ ಕಾರ್ಯಕ್ರಮ ಬೆಳ್ಳಾರೆಯಲ್ಲಿ ಇಂದು ಸಂಜೆ ಚಿತ್ರೀಕರಣಗೊಂಡಿತು.

ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಅವರು ಕಾರ್ಯಕ್ರಮ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶ್ರೀಮತಿ ರಾಜೀವಿ ಆರ್.ರೈ, ಬೆಳ್ಳಾರೆ ಪ್ರಾ.ಕೃ.ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶ್ರೀರಾಮ ಪಾಟಾಜೆ, ಗ್ರಾಮ ಪಂಚಾಯತ್ ಸದಸ್ಯರಾದ ಸಚಿನ್ ರಾಜ್ ಶೆಟ್ಟಿ, ಪದ್ಮನಾಭ ಶೆಟ್ಟಿ ಪೆರುವಾಜೆ, ಚಂದ್ರಶೇಖರ ಪನ್ನೆ, ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವ್ಯ.ಸ.ಮಾಜಿ ಅಧ್ಯಕ್ಷ ಉಮೇಶ್ ಕೆ.ಎಂ.ಬಿ, ಆನಂದ ಬೆಳ್ಳಾರೆ, ಜಯಂತ ಮಡಪ್ಪಾಡಿ, ಬೆಳ್ಳಾರೆ ರೋಟರಿ ಕ್ಲಬ್ ಅಧ್ಯಕ್ಷ ಶಶಿಧರ ಬಿ.ಕೆ,ಪ್ರೇಮಚಂದ್ರ ಬೆಳ್ಳಾರೆ, ಈಶ್ವರ ಲಹರಿ, ವಸಂತ ಬೋರ್ಕರ್, ರಿಕ್ಷಾ ಚಾಲಕರಾದ ಚಿರಂಜೀವಿ ,ಪ್ರಕಾಶ್,ಗೀತಾ ಪ್ರೇಮ್, ಸವಿತ, ಗಿರೀಶ್ ರೈ ಮತ್ತಿತರರು ಉಪಸ್ಥಿತರಿದ್ದರು.
ಗ್ರಾಮದ ಅಭಿವೃದ್ಧಿ,ರಸ್ತೆ ಅಭಿವೃದ್ಧಿ, ಭ್ರಷ್ಟಾಚಾರ ನಿರ್ಮೂಲನೆ, ಬೆಳ್ಳಾರೆಯಲ್ಲಿ ಸ್ಮಶಾನ ನಿರ್ಮಾಣ ,ಸುಳ್ಯ ವಿಧಾನಸಭಾ ಕ್ಷೇತ್ರದ ಮೀಸಲಾತಿ ರೊಟೇಷನ್ , ರೈಲ್ವೆ ಯೋಜನೆ, ವಿದ್ಯುತ್ ಸಮಸ್ಯೆ ಸೇರಿದಂತೆ ಹಲವು ವಿಷಯಗಳು ಪ್ರಸ್ತಾಪವಾಯಿತು, ಸುದ್ದಿ ಬಿಡುಗಡೆ ಪತ್ರಿಕೆ ವರದಿಗಾರರಾದ ಗಣೇಶ್ ಕುಕ್ಕುದಡಿ,ಈಶ್ವರ ವಾರಣಾಶಿ, ಕೃಷ್ಣ ಬೆಟ್ಟ, ಪ್ರಜ್ಞಾ ಎಸ್.ನಾರಾಯಣ್ ಅಚ್ರಪ್ಪಾಡಿ,ತಾಂತ್ರಿಕ ವಿಭಾಗದ ಶ್ರೀಧಾಮ ಅಡ್ಕಾರು, ಕೌಶಿಕ್ ಬಳ್ಳಕ ಸಹಕರಿಸಿದರು.