ಶ್ರೀ ಕರಿಭೂತ ಕೋಮಾಳಿ ದೈವಗಳ ಕೋಲ
ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವವು ಜರುಗುತ್ತಿದ್ದು, ಎ.5ರಂದು ರಾತ್ರಿ ಶ್ರೀ ಕರಿಭೂತ ಕೋಮಾಳಿ ದೈವಗಳ ಕೋಲ ಪ್ರಸಾದ ವಿತರಣೆ ಜರುಗಿತು.
ಎ.2ರಂದು ರಾತ್ರಿ ವಾಲಸಿರಿ ಉತ್ಸವ ನಡೆಯಿತು. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಎ.3ರಂದು ಮಧ್ಯಾಹ್ನ ಮಹಾಪೂಜೆ, ಸಂಜೆ ದೇವಳದಿಂದ ಉಳ್ಳಾಗುಳ ಭಂಡಾರ ಹೊರಟು ಮಂಟಮೆಯಲ್ಲಿ ಹಿರಿಯರ ನೇಮಕ್ಕೆ ಮುಡಿಯಾಗಿ ಮಾಡದಲ್ಲಿ ನೇಮ ನಂತರ ಸೋಮಕೊಟ್ಯಕ್ಕೆ ತೆರಳಿ ತಂಬಿಲ, ಫಲಹಾರವಾಗಿ ಪುನ: ತಂಬಿಲ, ಮಾಡಕ್ಕೆ ಹಿಂತಿರುಗಿ ಕಿರಿಯರ ನೇಮ, ಮತ್ತು ರುದ್ರಚಾಮುಂಡಿ ಆಗಿ ಭಂಡಾರ ದೇವಳಕ್ಕೆ ಬಂದು ಕಟ್ಟಾಜ್ಞೆಯಿಂದ ಭಂಡಾರವನ್ನು ಸ್ವಸ್ಥಾನದಲ್ಲಿರಿಸಲಾಯಿತು.
ಎ.4ರಂದು ಸಂಜೆ ಶ್ರೀ ಕಲ್ಕುಡ ಮತ್ತು ಪಾಷಾಣಮೂರ್ತಿ ದೈವಗಳ ಕೋಲ ಹಾಗೂ ಕೊರಗತನಿಯ ದೈವದ ಕೋಲ ನಡೆಯಿತು.
ಎ.5ರಂದು ಬೆಳಿಗ್ಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ, ರಾತ್ರಿ ಶ್ರೀ ಕರಿಭೂತ ಕೋಮಾಳಿ ಕೋಲಗಳು ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಪೆರಾಜೆ ಶ್ರೀ ಶಾಸ್ತಾವು ಯಕ್ಷಗಾನ ಕಲಾಸಂಘ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ರತಿ ಕಲ್ಯಾಣ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ ಸೇರಿದಂತೆ ಆಡಳಿತ ಮಂಡಳಿಯ ಪದಾಧಿಕಾರಿಗಳು, ದೇವತಕ್ಕರು, ತಕ್ಕಮುಖ್ಯಸ್ಥರುಗಳು ಸೇರಿದಂತೆ ಊರ – ಪರವೂರಿನ ಭಕ್ತಾದಿಗಳು ಉಪಸ್ಥಿತರಿದ್ದರು.
ಇಂದು ರಾತ್ರಿ ಶ್ರೀ ಕರಿಭೂತ ಕೋಮಾಳಿ ದೈವಗಳ ಹರಿಕೆ ಕೋಲ, ನಾಳೆ ರಾತ್ರಿ ಗುಳಿಗ ದೈವದ ಕೋಲ ಜರುಗಲಿದೆ.