ಸಂವಿಧಾನದ ಆಶಯವನ್ನು ಉಳಿಸುವ ಮತ್ತು ಗೌರವಿಸುವ ಅಭ್ಯರ್ಥಿಗೆ ಮತ ನೀಡಿ

0

ಸಂವಿಧಾನದ ಆಶಯವನ್ನು ಉಳಿಸುವ ಮತ್ತು ಗೌರವಿಸುವ ಅಭ್ಯರ್ಥಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಜ್ಞಾವಂತ ಜನರು ಮತ ನೀಡಬೇಕು ಎಂದು ಸುಳ್ಯದ ರಾಷ್ಟ್ರ ರಕ್ಷಾ ವೇದಿಕೆ ಮನವಿ ಮಾಡಿದೆ.

ಎ.6ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಷ್ಟ್ರ ರಕ್ಷಾ ವೇದಿಕೆಯ ಅಧ್ಯಕ್ಷ ಲಕ್ಷ್ಮೀಶ್ ಗಬ್ಲಡ್ಕ ಪ್ರಜಾಪ್ರಭುತ್ವದ ಉಳಿವು ಎಂದರೆ ದೇಶದ ಉಳಿವು. ಯಾವುದೇ ಸರಕಾರಗಳು ಪ್ರಜಾಪ್ರಭುತ್ವದ ಆಧಾರದಲ್ಲಿ ನಡೆಯಬೇಕು. ಆದರೆ ಕಳೆದ ಕೆಲವು ವರ್ಷಗಳ ಸನ್ನಿವೇಶಗಳನ್ನು ನೊಡಿದಾಗ ಪ್ರಜಾಪ್ರಭುತ್ವದ ಆಶಯಕ್ಕೆ ವ್ಯತಿರಿಕ್ತವಾದ ವಿಚಾರಗಳೇ ನಡೆದಿದೆ.

ಕೇಂದ್ರ ಸರಕಾರ 2014ರಿಂದ ಇವತ್ತಿನ ವರೆಗೆ ಅನೇಕ ಶಾಸನಗಳನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೊಳಿಸಿದೆ. ಲೋಕಸಭೆಯಲ್ಲಿ ಚರ್ಚೆಗೆ ಅವಕಾಶ ನೀಡದೆ ಹೀಗೆ ಮಾಡುತ್ತಾರೆಂದರೆ ಇದರ ಹಿಂದೆ ಹಿಡನ್ ಅಜೆಂಡಾ ಇಟ್ಟುಕೊಂqಡಿದ್ದಾರೆಂದರ್ಥ. ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ ಎಂದೇ ಭಾವಿಸಬೇಕಾಗುತ್ತದೆ.

ಒಂದು ಪಕ್ಷದ ಸಿದ್ಧಾಂತವನ್ನು ನಂಬುವುದೇ ದೇಶ ಭಕ್ತಿ ಎಂಬಂತಾಗಿದೆ. ಹಾಗಾಗಬಾರದು. ವಿಚಾರಗಳು ಮೌಲ್ಯಾಧಾರಿತವಾಗಿರಬೇಕೆ ಹೊರತು ಸಿದ್ಧಾಂತದಡಿ ಅಲ್ಲ ಎಂದ ಅವರು ಸಂವಿಧಾನ ಉಳಿಸುವ ಪ್ರಜಾಪ್ರಭುತ್ವದ ಆಶಯಕ್ಕೆ ಬೆಳೆಕೊಡುವ ಜನಪ್ರತಿನಿಧಿಯ ಆಯ್ಕೆಗೆ ಎಲ್ಲರೂ ಮಹತ್ವ ಕೊಡಬೇಕು ಎಂದು ಹೇಳಿದರು.

ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯೊಬ್ಬರು ಈ ಚುನಾವಣೆ ರಾಷ್ಟ್ರ ಭಕ್ತರ ಮತ್ತು ರಾಷ್ಟ್ರ ವಿರೋಧಿಗಳ ನಡುವಿನ ಚುನಾವಣೆ ಎಂದು ಹೇಳುತ್ತಾರೆಂದರೆ ಅವರು ಮಾತು ಎಷ್ಟು ಅಪಾಯಕಾರಿ ಎಂಬುದನ್ನು ಅರಿಯಬೇಕು. ತನ್ನ ಪಕ್ಷ, ಸಿದ್ಧಾಂತವನ್ನು ಒಪ್ಪದೇ ಇರುವವರನ್ನು ರಾಷ್ಟ್ರ ದ್ರೋಹಿ ಎಂದು ಹೇಳುತ್ತಾರೆಂದಾದರೆ ಇನ್ನೊಂದು ಪಕ್ಷದ ಅಭ್ಯರ್ಥಿ ಅದರಲ್ಲಿ ಕೆಲಸ ಮಾಡುವ ಎಲ್ಲ ಧರ್ಮ- ಜಾತಿಯವರನ್ನು ರಾಷ್ಟ್ರ ದ್ರೋಹಿ ಎಂದು ಹೇಳಿದಂತಾಯಿತಲ್ಲವೇ. ಈ ಚುನಾವಣೆಗೆ ಅಭಿವೃದ್ಧಿಯೇ ವಿಷಯವಾಗಬೇಕೆ ಹೊರತು ಭಾವನಾತ್ಮಕ ಸಂಗತಿಯಲ್ಲ.

ಕಳೆದ 30 ವರ್ಷದಲ್ಲಿ ಇಲ್ಲಿ ಏನಾಗಿದೆ - ಹಿಂದೆ ಏನಾಗಿದೆ, ಎಷ್ಟು ಉದ್ಯೋಗ ಸೃಷ್ಠಿಯಾಗಿದೆ ಎಂಬುದನ್ನು ನಾವು ವಿಚಾರ ಮಾಡಿ ಮತ ಚಲಾಯಿಸಬೇಕೆಂದು ಅವರು ಹೇಳಿದರು. ಸಮಿತಿ ಗೌರವ ಗೌರವ ಸದಸ್ಯ ಕೆ.ಪಿ.ಜಾನಿ ಮಾತನಾಡಿ,ಕಳೆದ ೧೦ ವರ್ಷದಲ್ಲಿ ಕೇಂದ್ರ ಸರಕಾರ ಸಂವಿಧಾನದ ಆಶಯವನ್ನು ಮೀರಿ ಹೋಗಿದ್ದಾರೆ. ಸಂವಿಧಾನಕ್ಕೆ ವಿರೋಧವಾದ ಕೆಲಸಗಳು ಆಗಿದೆ. ಆದ್ದರಿಂದ ಸಂವಿಧಾನಕ್ಕೆ ಗೌರವ ಕೊಡುವವರು ಮಾತ್ರ ರಾಷ್ಟ್ರ ಭಕ್ತರು. ಅಂತ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಜವಾಬ್ದಾರಿ ಪ್ರಜ್ಞಾವಂತ ಮತದಾರರಿಗಿದೆ ಎಂದು ಹೇಳಿದರು.
ಸಮಿತಿ ಗೌರವ ಸದಸ್ಯ ಕೆ.ಎಸ್. ಉಮ್ಮರ್ ಮಾತನಾಡಿ “ ಈಗಿನ ಕೇಂದ್ರ ಸರಕಾರ ಬಂದ ಬಳಿಕ ಭಾರದ ವಿಶ್ವದಲ್ಲಿ ನಂಬರ್ 1 ಆಗಿದೆ ಎಂದು ಹೇಳುತ್ತಾರೆ. ಬೀಪ್ ರಪ್ತ್‌ನಲ್ಲಿ ನಂಬರ್ ೧ ಆಗಿದೆ ಹೊರತು ಬೇರಾವುದರಲ್ಲೂ ಆಗಿಲ್ಲ. ಹಾಗಿದ್ದರೆ ಹೇಳಲಿ. ಯಾವುದೇ ಕಾನೂನು ಮಾಡುವಾಗ ಪರ – ವಿರೋಧ ಚರ್ಚೆಯಾಗಬೇಕು. ಅದಕ್ಕೆ ಅವಕಾಶನೇ ನೀಡದೆ ಸರ್ವಾಧಿಕಾರ ಧೋರಣೆ ಈ ಸರಕಾರದಿಂದ ಆಗಿದೆ ಎಂದು ಹೇಳಿದರು.


ಸಮಿತಿ ಕಾರ್ಯದರ್ಶಿ ವಸಂತ ಪೆಲ್ತಡ್ಕ, ಉಪಾಧ್ಯಕ್ಷ ಅಚ್ಯುತ್ತ ಮಲ್ಕಜೆ, ಕೋಶಾಧಿಕಾರಿ ಅಶ್ರಫ್ ಎಲಿಮಲೆ ಇದ್ದರು.