ಸುಳ್ಯ ಸ.ಪ.ಪೂ. ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿನಿ ಅಶ್ವಿತಾ ಎಂ.ಡಿ. ಜಿಲ್ಲೆಗೆ ಪ್ರಥಮ
ರಾಜ್ಯ ಮಟ್ಟದ ಎನ್.ಎಂ.ಎಂ.ಎಸ್. ಪರೀಕ್ಷೆಯಲ್ಲಿ
ಸರಕಾರಿ ಪದವಿ ಪೂರ್ವ ಕಾಲೇಜು ಸುಳ್ಯ ಇದರ ಪ್ರೌಢ ಶಾಲಾ ವಿಭಾಗದ 8ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಅಶ್ವಿತಾ ಎಮ್.ಡಿ. 115 ಅಂಕ ಪಡೆದು ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನಿಯಾಗಿದ್ದಾಳೆ.
ಈಕೆ ಜಾಲ್ಸೂರು ಗ್ರಾಮದ ಮಹಾಬಲಡ್ಕದ ದಾಮೋದರ ಹಾಗು ಶ್ರೀಮತಿ ಶೀಲಾವತಿ ಇವರ ಸುಪುತ್ರಿ.
ರಾಜ್ಯದ ಬುದ್ಧಿವಂತ ವಿದ್ಯಾರ್ಥಿಗಳನ್ನು ಸ್ವರ್ಧಾತ್ಮಕ ಪರೀಕ್ಷೆ ಮೂಲಕ ಆಯ್ಕೆ ಮಾಡಿ ಅವರಿಗೆ ವಿಶೇಷ ವಿದ್ಯಾರ್ಥಿ ವೇತನ ನೀಡುವ ಈ ಪರೀಕ್ಷೆಯಲ್ಲಿ ದಕ್ಷಿಣ ಕನ್ನಡದ 5841 ವಿದ್ಯಾರ್ಥಿಗಳು ಹಾಜರಾಗಿದ್ದು ಅದರಲ್ಲಿ ಅಶ್ವಿತಾ ಎಮ್. ಡಿ ಇವಳ ಸಾಧನೆ ಅಪೂರ್ವವಾದುದು. ಪ್ರಥಮ ಬಾರಿಗೆ ಜ್ಯೂನಿಯರ್ ಕಾಲೇಜು ಸುಳ್ಯದ ವಿದ್ಯಾರ್ಥಿ ಈ ಜಿಲ್ಲಾ ಮಟ್ಟದ ಸಾಧನೆ ಗೈದಿದ್ದಾಳೆ.
ಈಕೆ ಬಹುಮುಖ ಪ್ರತಿಭೆಯಾಗಿದ್ದು ಉತ್ತಮ ಹಾಡುಗಾರ್ತಿ ಕೂಡಾ ಹೌದು.
ಈಗ ಪರೀಕ್ಷೆಗೆ ಹಾಜರಾದ ಅಂಕ ಪಟ್ಟಿ ಪ್ರಕಟವಾಗಿದ್ದು ಮುಂದೆ ವಿದ್ಯಾರ್ಥಿ ವೇತನ ಪಡೆದವರ ಪಟ್ಟಿ ಇಲಾಖೆಯಿಂದ ಪ್ರಕಟವಾಗಲಿದೆ.
ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದವರಿಗೆ ಮುಂದಿನ ನಾಲ್ಕು ವರ್ಷಗಳಲ್ಲಿ ವಾರ್ಷಿಕ ತಲಾ ರೂ. ಹನ್ನೆರಡು ಸಾವಿರದಂತೆ ಒಟ್ಟು ರೂ. ನಲುವತ್ತೆಂಟು ಸಾವಿರ ವಿದ್ಯಾರ್ಥಿ ವೇತನ ದೊರೆಯಲಿದೆ.
ಸ.ಪ.ಪೂ.ಕಾ. ಸುಳ್ಯದಲ್ಲಿ ಎನ್.ಎಮ್.ಎಮ್. ಎಸ್. ಪರೀಕ್ಷೆಯ ವಿಶೇಷ ತರಬೇತಿ ನಡೆಸಲು ಸಹಕಾರ ನೀಡಿದ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗು ಸದಸ್ಯರು, ಜನಾರ್ದನ ಮಾಸ್ಟರ್ ಗಣಿತ ಕೇಂದ್ರ ಸುಳ್ಯ ಇದರ ಪದಾಧಿಕಾರಿಗಳು, ಎಲ್ಲಾ ಶಿಕ್ಷಕ ವೃಂದದವರು, ಪೋಷಕರಿಗೆ ಉಪಪ್ರಾಂಶುಪಾಲರಾದ ಶ್ರೀ ಪ್ರಕಾಶ ಮೂಡಿತ್ತಾಯ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ.