ಮಂಡೆಕೋಲು ಗ್ರಾಮದ ಕನ್ಯಾನ ದಾಮೋಜಿರಾವ್ ರವರ ಪತ್ನಿ ಶ್ರೀಮತಿ ಇಂದಿರಾ (74) ರವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ಮನೆಯ ಸಮೀಪ ತೆಂಗಿನ ಮರದ ಬುಡಕ್ಕೆ ಹಗ್ಗ ಹಾಕಿ ಬಳಿಕ ಕುತ್ತಿಗೆಗೆ ಸುತ್ತಿಕೊಂಡು ಅಲ್ಲೇ ಇದ್ದ ಕೆರೆಗೆ ಇಳಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಂಜೆ ಮನೆಯವರು ಹುಡುಕಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂತು. ಪೋಲೀಸರಿಗೆ ವಿಷಯ ತಿಳಿದು ಅವರು ಬಂದು ಮಹಜರು ನಡೆಸಿದ್ದಾರೆಂದು ತಿಳಿದುಬಂದಿದೆ.
ಮೃತರು ಪುತ್ರ ಚಂದ್ರಶೇಖರ, ಪುತ್ರಿಯರಾದ ವನಜಾ ಹಾಗೂ ವೇದಾವತಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.