ರೋಟರಿ ಕ್ಲಬ್ ಸುಳ್ಯ & ವಾತ್ಸಲ್ಯ ಮಕ್ಕಳ ಆಸ್ಪತ್ರೆ ವತಿಯಿಂದ ಪ್ರಥಮ ಚಿಕಿತ್ಸಾ ಶಿಬಿರ

0

ರೋಟರಿ ಕ್ಲಬ್ ಸುಳ್ಯ & ವಾತ್ಸಲ್ಯ ಮಕ್ಕಳ ಆಸ್ಪತ್ರೆ ವತಿಯಿಂದ ವಿಧ್ಯಾರ್ಥಿಗಳಿಗಾಗಿ ಪ್ರಥಮ ಚಿಕಿತ್ಸಾ ಶಿಬಿರ ಕಾರ್ಯಕ್ರಮ ಎ.7ರಂದು ಸುಳ್ಯದ ರೋಟರಿ ಶಾಲೆ ಸಭಾಂಗಣದಲ್ಲಿ ನಡೆಯಿತು ಉಚಿತ ಶಿಬಿರದಲ್ಲಿ ಪ್ರೌಢಶಾಲಾ ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳು ಬಾಗವಹಿಸಿದರು. ಶಿಬಿರವನ್ನು ತಾಲೂಕು ವೈದ್ಯಾಧಿಕಾರಿ ನಂದಕುಮಾರ್ ಉದ್ಘಾಟಿಸಿದರು.

ರೋಟರಿ ಕ್ಲಬ್ ಅಧ್ಯಕ್ಷ ರೊ.ಅನಂದ ಖಂಡಿಗ,ಕಾರ್ಯದರ್ಶಿ ರೊ.ಕಸ್ತೂರಿ ಶಂಕರ್,ರೋಟರಿ ಶಾಲಾ ಸಂಚಾಲಕ ಗಿರೀಜಾಶಂಕರ್,ವಾತ್ಸಲ್ಯ ಮಕ್ಕಳ ಆಸ್ಪತ್ರೆಯ ಡಾ.ಶ್ರೀ ಕೃಷ್ಣ ಬಿ.ಎನ್ ಮೊದಲಾದವರು ಉಪಸ್ಥಿತರಿದ್ದರು.
ಡಾ.ಸಿ ರಾಮಚಂದ್ರ ಭಟ್ ,ಡಾ.ಹಿಮಕರ, ಡಾ.ರೋಶನ್, ಡಾ.ತಾರರೋಶನ್, ಪ್ರಕಾಶ್ ಮೂಡಿತಾಯ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು.