ಆಧುನಿಕ ಕಾಲಘಟ್ಟದಲ್ಲಿ ಸಮಾಜದಲ್ಲಿ ಲಾಭ ನಷ್ಟದಲ್ಲಿ ಜನರ ಜೀವನ : ಚಂದ್ರಾವತಿ ಬಡ್ಡಡ್ಕ
ಸಮಾಜ ಸೇವೆ ದೇವರ ಸೇವೆ,ಆದರೆ ಆಧುನಿಕ ಸಮಾಜದಲ್ಲಿ ಇಂದು ಲಾಭ ನಷ್ಟ ಜನರ ಜೀವನ ನಡೆಯುತ್ತಿದ್ದು ಇದು ಸಮಾಜಕ್ಕೆ ಒಳಿತಲ್ಲ . ಪ್ರೀತಿ ಸಾಮರಸ್ಯ ಕಡಿಮೆಯಾಗಿದೆ ಎಂದು ಲೇಖಕಿ ಸಾಹಿತಿ ಚಂದ್ರಾವತಿ ಬಡ್ಡಡ್ಕ ಹೇಳಿದರು.
ಅವರು ಅಜ್ಜಾವರ ದೇವರ ಕಳಿಯ ಚೈತನ್ಯ ಸೇವಾ ಟ್ರಸ್ಟ್ (ರಿ.) ಇದರ ದೇವಿ ಭಗವತಿ ಮಂದಿರದ 26ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಅಂಗವಾಗಿ ಇಲ್ಲಿಯ ಸ್ವಾಮೀಜಿ ಶ್ರೀ ಯೋಗೇಶಗವರಾನಂದ ಸರಸ್ವತಿ ಅವರ 202ನೇ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಆಶ್ರಮದಲ್ಲಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಸ್ವಾಮೀಜಿಯವರು ಪುಸ್ತಕ ಬರೆದು ಅದನ್ನು ಉಚಿತವಾಗಿ ನೀಡುತ್ತಿದ್ದಾರೆ ಇದು ಶ್ರೇಷ್ಠ ಕೆಲಸ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೃಷಿ ಸಖಿ ಮೋಹಿನಿ ಗೂನಡ್ಕ ಅವರು ಮಾತನಾಡಿ, ಅಧುನಿಕ ಕಾಲದಲ್ಲಿ ನಾವು ವಿಷ ಮಿಶ್ರಿತ ಆಹಾರವನ್ನು ನಾವು ಸೇವಿಸುತ್ತಿದ್ದು ಇದು ನಮ್ಮ ಆರೋಗ್ಯಕ್ಕೆ ಹಾನಿಕಾರಕ. ಆದುದರಿಂದ ನಾವು ಆದಷ್ಟು ಸಾವಯವ ಆಹಾರ ಬೆಳೆಗಳನ್ನು ಬೆಳೆಸಿ ಸೇವಿಸಬೇಕು.ರಾಸಾಯನಿಕ ಮುಕ್ತ ವಾಣಿಜ್ಯ ಕ್ರಷಿ ಮಾಡಿ ಭೂಮಿಯ ಫಲವತ್ತತೆ ಹೆಚ್ಚಿಸಬೇಕೆಂದು ಹೇಳಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಳ್ಯ ಕೆವಿಜಿ ಆಯುರ್ವೇದ ಕಾಲೇಜಿನ ಪ್ರೋ.ಡಾ.ಹರ್ಷವರ್ದನ ಮಾತನಾಡಿ, ಮಕ್ಕಲ್ಲಿ ನೈತಿಕ ಮೌಲ್ಯ ಕುಸಿಯುತ್ತಿದೆ.ಸಂಸ್ಕಾರದ ಕೊರತೆ ಎದ್ದು ಕಾಣುತ್ತಿದೆ.ಮಕ್ಕಳಿಗೆ ನೈತಿಕ ಶಿಕ್ಷಣ ಸಂಸ್ಕಾರಯುತ ಶಿಕ್ಷಣ ನೀಡುವ ಅಗತ್ಯ ಇದೆ ಎಂದು ಅವರು ಹೇಳಿದರು.
ಆಶ್ರಮದ ಸ್ವಾಮೀಜಿ ಶ್ರೀ ಯೋಗೇಶ್ವರಾನಂದ ಸರಸ್ವತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶ್ರಮದ ಟ್ರಸ್ಟಿ ಪ್ರಣವಿ ಸ್ವಾಗತಿಸಿ ವಂದಿಸಿದರು.
ಆಶ್ರಮದ ಹಿರಿಯ ವಿದ್ಯಾರ್ಥಿ ಮಿಥುನ್ ಕಾರ್ಯಕ್ರಮ ನಿರೂಪಿಸಿದರು.
ಬೆಳಿಗ್ಗೆ ಗಣಪತಿ,ಸತ್ಯನಾರಾಯಣ ದೇವರ ಪೂಜೆ, ಅಡೂರು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿಯ ಬಾಲ ಪ್ರತಿಭೆಗಳಿಂದ ಭಜನಾ ಸತ್ಸಂಗ ನಡೆಯಿತು.