ಮತದಾನ ಜಾಗೃತಿಗಾಗಿ ಸುದ್ದಿ ಮತದಾರರ ಕಡೆಗೆ

0

ಸುಬ್ರಹ್ಮಣ್ಯದಲ್ಲಿ ಸುದ್ದಿ ಚುನಾವಣಾ ಕುರುಕ್ಷೇತ್ರ

ಕಾಂಗ್ರೆಸ್ ಗ್ಯಾರಂಟಿಗಳಿಗೆ ಮತದಾರರು ಮಾರು ಹೋಗಲ್ಲ: ಬಿಜೆಪಿ

ಬಿಜೆಪಿ ಭಾವನೆಗಳ ಆಧಾರದಲ್ಲಿ ಮತಯಾಚನೆ ಮಾಡುತ್ತಿದೆ: ಕಾಂಗ್ರೆಸ್

ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾನ ಜಾಗೃತಿಗಾಗಿ ಸುದ್ದಿಯ ವತಿಯಿಂದ “ಚುನಾವಣಾ ಕುರುಕ್ಷೇತ್ರ ” ಎಂಬ ವಿನೂತನ ಕಾರ್ಯಕ್ರಮ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿನ್ನೆ ಚಿತ್ರೀಕರಣಗೊಂಡಿತು.

ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಅವರು ಕಾರ್ಯಕ್ರಮ ನಡೆಸಿಕೊಟ್ಟರು.

ಬಿಜೆಪಿ ಭಾವನೆಗಳ ಮೇಲೆ ಮತಯಾಚನೆ ಮಾಡುತ್ತಿದೆ, ಜನರನ್ನು ಎತ್ತಿ ಕಟ್ಟಿ ಕೇಳುತ್ತಾರೆ. ದೇಶದ ಅಭಿವೃದ್ಧಿ ಶೂನ್ಯ. ಬೆಲೆ ಏರಿಕೆ ಯೇ ಇವರ ಸಾಧನೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದರು.

ಕಾಂಗ್ರೆಸ್ ನ ಗ್ಯಾರಂಟಿ ಕೆಲಸ ಮಾಡಲ್ಲ, ಒಂದು ವರ್ಗದದವರನ್ನು ಒಲೈಸುವ ಕೆಲಸ ಮಾಡುತ್ತಿದೆ. ಅಭಿವೃದ್ಧಿಗೆ ಇವರಲ್ಲಿ ಹಣವಿಲ್ಲ ಎಂದು ಬಿಜೆಪಿ ನಾಯಕರು ಹೇಳಿದರು.

ಬಿಜೆಪಿ ಮತ್ತು ಕಾಂಗ್ರೆಸ್ ನ ಮುಖಂಡರು, ಮತದಾರರು ಸಂವಾದದಲ್ಲಿ ಭಾಗವಹಿಸಿದ್ದರು. ಅಶೋಕ್ ನೆಕ್ರಾಜೆ, ಭಾರತಿ ದಿನೇಶ್, ಶಿವರಾಮ ನೆಕ್ರಾಜೆ, ಭರತ್ ನೆಕ್ರಾಜೆ, ನಾರಾಯಣ ಅಗ್ರಹಾರ, ಹರೀಶ್ ಇಂಜಾಡಿ, ಶಿವರಾಮ ರೈ, ಪವನ್ ಎಂ.ಡಿ, ಬಾಲಕೃಷ್ಣ ಮರೀಲ್, ವಿಮಲಾ ರಂಗಯ್ಯ, ಗೋಪಾಲ ಎಣ್ಣೆಮಜಲು, ಶೇಷಕುಮಾರ್, ನಾಗವೇಣಿ ನೂಚಿಲ, ಚಿದಾನಂದ ಗೌಡ ದೇವರಗದ್ದೆ, ಗೋಪಾಲಕೃಷ್ಣ ಭಟ್, ಭಾರತಿ ಪರ್ವತಮುಖಿ, ನಿವೃತ್ತ ಶಿಕ್ಷಕ ಶಿವರಾಮ ಏನೆಕಲ್ಲು ಮತ್ತಿತರರು ಭಾಗವಹಿಸಿದ್ದರು.

ಸುದ್ದಿ ಬಿಡುಗಡೆ ಪತ್ರಿಕೆಯ ಮ್ಯಾನೇಜರ್ ಯಶ್ವಿತ್ ಕಾಳಮ್ಮನೆ, ವರದಿಗಾರರಾದ ಶಿವರಾಮ ಕಜೆಮೂಲೆ, ಸುದ್ದಿ ಚಾನೆಲ್ ನ ತಾಂತ್ರಿಕ ವಿಭಾಗದ ಮುಖ್ಯಸ್ಥ ಶ್ರೀಧಾಮ ಅಡ್ಕಾರು ಸಹಕರಿಸಿದರು.