ಶ್ರೀ ಮಹಾವಿಷ್ಣುಮೂರ್ತಿ ಒತ್ತೆಕೋಲದೊಂದಿಗೆ ಪೆರಾಜೆ ಶ್ರೀ ಶಾಸ್ತಾವು ದೇವರ ಜಾತ್ರೋತ್ಸವ ಸಂಪನ್ನ

0

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವವು ಮಾ.9 ರಿಂದ ಆರಂಭಗೊಂಡು ಇಂದು ಬೆಳಿಗ್ಗೆ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲದೊಂದಿಗೆ ಸಂಪನ್ನಗೊಂಡಿತು.


ನಿನ್ನೆ ರಾತ್ರಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಭಂಡಾರ ತೆಗೆದು, ಬಳಿಕ ಕೂಡುವುದು, ಮೇಲೇರಿ ಅಗ್ನಿಸ್ಪರ್ಶ ಮತ್ತು ಕುಳ್ಚಾಟ ನಡೆಯಿತು.
ಇಂದು ಬೆಳಿಗ್ಗೆ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲ ನಡೆದು, ರುದ್ರಚಾಮುಂಡಿ ದೈವದ ಕೋಲ ನಡೆಯಿತು. ನಂತರ ಪ್ರಸಾದ ವಿತರಣೆ ಬಳಿಕ ಮಾರಿಕಳದೊಂದಿಗೆ ಕಾಲಾವಧಿ ಜಾತ್ರೋತ್ಸವವು ಸಂಪನ್ನಗೊಂಡಿತು.

ಜಾತ್ರೋತ್ಸವದ ಪ್ರಯುಕ್ತ ಕ್ರೀಡಾ ಕಾರ್ಯಕ್ರಮದ ಅಂಗವಾಗಿ ರಾತ್ರಿ ದೇವಾಲಯದ ಮುಂಭಾಗದಲ್ಲಿ ಪೆರಾಜೆಯ ಯುವಶಕ್ತಿ ಕ್ರೀಡಾ ಮತ್ತು ಕಲಾ ಹವ್ಯಾಸಿ ಸಂಘದ ಪ್ರಾಯೋಜಕತ್ವದಲ್ಲಿ ನಡೆದ 32ನೇ ವರ್ಷದ ಹೊನಲು ಬೆಳಕಿನ ಸಾರ್ವಜನಿಕ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟದಲ್ಲಿ ಪೆರಾಜೆಯ ಅಗ್ನಿ ಯುವಕ ಮಂಡಲ ಬಂಟೋಡಿ ಪ್ರಥಮ ಹಾಗೂ ಎನ್.ಎಂ.ಸಿ. ಸುಳ್ಯ ದ್ವಿತೀಯ ಸ್ಥಾನ ಪಡೆದುಕೊಂಡಿತು.

(ಫೋಟೋ:ವಿಷ್ಣುಪ್ರಸಾದ್ ಬಂಟೋಡಿ)