ಪೆರುವಾಜೆ – ಮುರ್ಕೆತ್ತಿಗೆ ಬೋರ್ ವೆಲ್ ಕೊರೆಯಲು, ದೇವರಗುಂಡಿ ಯಲ್ಲಿ ಟ್ಯಾಂಕ್ ನಿರ್ಮಾಣಕ್ಕೆ ಅನುದಾನ ನೀಡಲು ಮನವಿ

0

ಪೆರುವಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರ್ಕೆತ್ತಿ ಪರಿಸರದಲ್ಲಿ ಜಾಕ್ ವೆಲ್ ಮೂಲಕ ಕುಡಿಯುವ ನೀರಿನ ಸಂಪರ್ಕ ಇದ್ದು ಇದೀಗ ಜಾಕ್ ವೆಲ್ ನಲ್ಲಿ ನೀರಿನ ಪ್ರಮಾಣ ಕಡಿಮೆ ಆಗಿರುವುದರಿಂದ ಈ ಭಾಗದಲ್ಲಿ ಬೋರ್ ವೆಲ್ ವ್ಯವಸ್ಥೆ ಗೆ ಅನುದಾನ ನೀಡುವಂತೆ ಮತ್ತು ದೇವರಗುಂಡಿಯಲ್ಲಿ ನೀರಿನ ಚಿಕ್ಕ ಟ್ಯಾಂಕ್ ನಿಂದ ನೀರು ಸರಬರಾಜು ಮಾಡಲು ತುಂಬಾ ತೊಂದರೆ ಆಗಿದ್ದು ಇಲ್ಲಿಗೆ ಹೊಸ ಟ್ಯಾಂಕ್ ನಿರ್ಮಾಣಕ್ಕೆ ಅನುದಾನ ನೀಡುವಂತೆ ಜಿಲ್ಲಾಧಿಕಾರಿ ಅವರಿಗೆ ಪೆರುವಾಜೆ ಗ್ರಾಮ ಪಂಚಾಯಿತಿ ಸದಸ್ಯರಾದ ಸಚಿನ್ ರಾಜ್ ಶೆಟ್ಟಿ ಮನವಿ ಮಾಡಿದ್ದಾರೆ.