ಸುಳ್ಯ ಜನಜಾಗೃತಿ ವೇದಿಕೆಯ ಕ್ರಿಯಾಯೋಜನಾ ಸಭೆ ಹಾಗೂ ಯೋಜನಾಧಿಕಾರಿ ನಾಗೇಶ್ ರವರಿಗೆ ಬೀಳ್ಕೊಡುಗೆ

0

ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ಪದಾಧಿಕಾರಿಗಳ ಕ್ರಿಯಾಯೋಜನಾ ಸಭೆ ಮತ್ತು ಭದ್ರಾವತಿಗೆ ವರ್ಗಾವಣೆಗೊಂಡ ಯೋಜನಾಧಿಕಾರಿ ನಾಗೇಶ್ ಪಿ ಯವರನ್ನು ಬೀಳ್ಕೊಡುವ ಸಮಾರಂಭವು ಎ.10 ರಂದು ಯೋಜನಾಧಿಕಾರಿ ಯವರ ಕಚೇರಿಯ ಸಭಾಂಗಣದಲ್ಲಿ ನಡೆಯಿತು.

ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಲೋಕನಾಥ ಅಮೆಚೂರ್ ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಜಿಲ್ಲಾ ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ
ಎನ್. ಎ. ರಾಮಚಂದ್ರ ಮತದಾರರು ಮದ್ಯಪಾನದ ಆಮಿಷಕ್ಕೆ ಬಲಿಯಾಗಬಾರದು ಎಂಬ ಜಾಗೃತಿ ಸಂದೇಶವಿರುವ ಕರಪತ್ರವನ್ನು ಬಿಡುಗಡೆ ಗೊಳಿಸಿದರು.

ವೇದಿಕೆಯಲ್ಲಿ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಉಡುಪಿ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್, ಸುಳ್ಯ ಯೋಜನಾಧಿಕಾರಿ ನಾಗೇಶ್ ಪಿ, ಜನಜಾಗೃತಿ ನಿಕಟ ಪೂರ್ವ ಅಧ್ಯಕ್ಷ ಮಹೇಶ್ ಕುಮಾರ್ ಮೇನಾಲ, ಭವಾನಿಶಂಕರ ಅಡ್ತಲೆ, ಬಾಲಕೃಷ್ಣ ಬೊಳ್ಳೂರು, ಶ್ರೀಮತಿ ವಿಮಲಾ ರಂಗಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪದ್ಮನಾಭ ಜೈನ್ ಪ್ರಾರ್ಥಿಸಿದರು. ಯೋಜನಾಧಿಕಾರಿ ನಾಗೇಶ್ ಪಿ.ಸ್ವಾಗತಿಸಿದರು. ಗಣೇಶ್ ಆಚಾರ್ಯ ಕ್ರಿಯಾಯೋಜನೆಯ ವರದಿ ಮಂಡಿಸಿದರು. ಮೇಲ್ವಿಚಾರಕಿ ಶ್ರೀಮತಿ ಮಮತಾ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಸುಳ್ಯದಿಂದ ಭದ್ರಾವತಿಗೆ ವರ್ಗಾವಣೆಗೊಂಡ ಯೋಜನಾಧಿಕಾರಿ ನಾಗೇಶ್ ಪಿ ಯವರನ್ನು ವೇದಿಕೆಯ ಹಾಗೂ ಯೋಜನೆಯ ವತಿಯಿಂದ ಸನ್ಮಾನಿಸಲಾಯಿತು.
ತಾಲೂಕು ಜನಜಾಗೃತಿ ವೇದಿಕೆಯ ಪದಾಧಿಕಾರಿಗಳಾದ
ಎಂ.ವೆಂಕಪ್ಪ ಗೌಡ, ಪದ್ಮನಾಭ ಜೈನ್,ಬೂಡು ರಾಧಾಕೃಷ್ಣ ರೈ, ಶಿವಪ್ರಕಾಶ್ ಅಡ್ಪಂಗಾಯ, ಮಲ್ಲೇಶ್ ಬೆಟ್ಟಂಪಾಡಿ, ಮಿತ್ರದೇವ ಮಡಪ್ಪಾಡಿ, ಸೋಮಶೇಖರ ಪೈಕ ಹಾಗೂ
ಕೇಂದ್ರ ಒಕ್ಕೂಟದ ಪದಾಧಿಕಾರಿಗಳು, ವಲಯ ಒಕ್ಕೂಟದ ಸದಸ್ಯರು, ನವಜೀವನ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು,
ಯೋಜನೆಯ ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು, ಕಚೇರಿ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.