ವಿಜ್ಞಾನ ವಿಭಾಗ: ಶೇ. 100 , ಗಣಕ ವಿಜ್ಞಾನ: ಶೇ. 99 , ವಾಣಿಜ್ಯ ವಿಭಾಗ : ಶೇ. 99, ಕಲಾವಿಭಾಗ : ಶೇ. 98.80
ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ೨೦೨೩-೨೪ನೇ ಸಾಲಿನ ಪಿ.ಯು.ಸಿ. ವಾರ್ಷಿಕ ಪರೀಕ್ಷೆಗೆ ಹಾಜರಾದ ಒಟ್ಟು 370 ವಿದ್ಯಾರ್ಥಿಗಳಲ್ಲಿ 365 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಹೀಗಾಗಿ ಕಾಲೇಜಿಗೆ ಒಟ್ಟು 98.65% ಫಲಿತಾಂಶ ಲಭಿಸಿದೆ. ಇವರಲ್ಲಿ 98 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 242 ಮಕ್ಕಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ 100% ಫಲಿತಾಂಶ ಲಭಿಸಿದರೆ 80 ಮಂದಿ ಡಿಸ್ಟಿಂಕ್ಷನ್ ಪಡೆದಿದ್ದಾರೆ. ಗಣಕ ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ 99% ಮತ್ತು ಕಲಾ ವಿಭಾಗದಲ್ಲಿ ವಿಭಾಗದಲ್ಲಿ 98.80% ಫಲಿತಾಂಶ ಬಂದಿದೆ.
ವಿಜ್ಞಾನ ವಿಭಾಗ:100%
ವಿಜ್ಞಾನ ವಿಭಾಗದಲ್ಲಿ ಒಟ್ಟು 97 ವಿದ್ಯಾರ್ಥಿಗಳು ಹಾಜರಾಗಿದ್ದು, ಇವರಲ್ಲಿ ಒಟ್ಟು 97 ವಿದ್ಯಾರ್ಥಿಗಳು ಉತ್ತೀರ್ಣಗೊಂಡು, 100ಶೇ. ಫಲಿತಾಂಶ ಬಂದಿರುತ್ತದೆ. 40 ಡಿಸ್ಟಿಂಕ್ಷನ್, 57 ಪ್ರಥಮ ಶ್ರೇಣಿ ಪಡೆದಿರುತ್ತಾರೆ. ಇದರಲ್ಲಿ ರಾಧಿಕಾ ಯು.ಆರ್(578), ಆತ್ಮಶ್ರೀ ಎಚ್.ಜಿ(577), ಮನಸ್ವಿ ಎ.ವೈ(577),ಆಶಿಕಾ.ಬಿ(574) ಅಂಕ ಪಡೆದು ಕಾಲೇಜಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ.
ಗಣಕ ವಿಜ್ಞಾನ:99%
ಗಣಕ ವಿಜ್ಞಾನ ವಿಭಾಗದಲ್ಲಿ 98 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 97 ವಿದ್ಯಾರ್ಥಿಗಳು ಉತ್ತೀರ್ಣಗೊಂಡು, 99% ಶೇ. ಫಲಿತಾಂಶ ಬಂದಿರುತ್ತದೆ. ಇದರಲ್ಲಿ 35 ವಿಶಿಷ್ಠ ಶ್ರೇಣಿ, 59 ಪ್ರಥಮ ಶ್ರೇಣಿ,3 ದ್ವಿತೀಯ ಶ್ರೇಣಿ ಲಭಿಸಿದೆ. ದುರ್ಗಾಲಕ್ಷ್ಮಿ (583), ಶ್ರೀಶಾ.ಎಂ(579), ಸ್ವಸ್ತಿ ಎಸ್.ರೈ(573),ಕೀರ್ತನಾ ವಿ.ಎಸ್(572) ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ,ದ್ವಿತೀಯ ಮತ್ತು ತೃತೀಯ ಸ್ಥಾನಿಯಾಗಿದ್ದಾರೆ.
ವಾಣಿಜ್ಯ ವಿಭಾಗ:99%
ವಾಣಿಜ್ಯ ವಿಭಾಗದಲ್ಲಿ ಒಟ್ಟು 91 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 90 ವಿದ್ಯಾರ್ಥಿಗಳು ತೇರ್ಗಡೆಗೊಂಡು 99ಶೇ.ಫಲಿತಾಂಶ ಬಂದಿರುತ್ತದೆ. 10 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದು, ಪ್ರಥಮ ದರ್ಜೆಯಲ್ಲಿ 72 ವಿದ್ಯಾರ್ಥಿಗಳು ಮತ್ತು ದ್ವಿತೀಯ ದರ್ಜೆಯಲ್ಲಿ 8 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ತೃತೀಯ ದರ್ಜೆ ಹೇಮಶ್ರೀ(572), ಚರಣ್.ಕೆ(547), ಭುವನೇಶ್ವರಿ.ಕೆ(539) ಪಡೆದು ತರಗತಿಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
ಕಲಾವಿಭಾಗ: 98.80%
ಕಲಾವಿಭಾಗದಲ್ಲಿ ಒಟ್ಟು 84ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ 81 ವಿದ್ಯಾರ್ಥಿಗಳು ತೇರ್ಗಡೆಗೊಂಡು, 98.80 ಶೇ.ಫಲಿತಾಂಶ ಬಂದಿರುತ್ತದೆ. ಇದರಲ್ಲಿ 13 ವಿಶಿಷ್ಠ ಶ್ರೇಣಿ, 54 ಮಂದಿ ಪ್ರಥಮ ದರ್ಜೆ, 14 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಹೃತೀಶ್ ಪದ್ಮನಾಭ (575), ಸಾರಿಕಾ ಎನ್.ಎಸ್ (573), ಹಿತೇಶ್.ಎ(572), ಕಾಲೇಜಿಗೆ ಪ್ರಥಮ,ದ್ವಿತೀಯ, ತೃತೀಯ ಸ್ಥಾನಿಯಾಗಿದ್ದಾರೆ.