ಪಂಜ ಪೇಟೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಚುನಾವಣಾ ಪ್ರಚಾರ
ಏ.11 ರಂದು ನಡೆಯಿತು.
ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ರವರು
ಮಾತನಾಡಿ
“ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾವು ಇರುವುದಕ್ಕೆ ಪುಣ್ಯ ಮಾಡಿರಬೇಕು.
ಕೋರ್ಟ್, ಏರ್ಪೋರ್ಟ್, ರೈಲ್ವೆ ಭೂಸಾರಿಗೆ ಇಲ್ಲಿದೆ. ಈ ಎಲ್ಲಾ ಸೌಲಭ್ಯ ಗಳು ದೇಶದ ಬೆರಳೆಣಿಕೆ
ನಗರದಲ್ಲಿ ಮಾತ್ರ ಇದೆ. ಆದರೆ ಇದಕ್ಕೆ ಅನುಗುಣವಾಗಿ ನಮ್ಮ ಜಿಲ್ಲೆ ಅಭಿವೃದ್ಧಿಯೇ ಆಗಿಲ್ಲ.ಬಿ.ಜೆ.ಪಿ ಯವರದು ಜಾತಿ, ಧರ್ಮಗಳ ನಡುವೆ ಕಂದಕ ಏರ್ಪಡಿಸುವುದು ಮತ್ತು ಅಭ್ಯರ್ಥಿಗಳ ಬದಲಾಯಿಸುವುದೇ ಸಾಧನೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಚುನಾವಣೆ ಪೂರ್ವದ ಭರವಸೆಯಂತೆ ನುಡಿದಂತೆ ನಡೆದಿದೆ.
ಜೊತೆಗೆ 5 ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಗೊಳಿಸಿದದ್ದು ಜನರಿಗೆ ಬಹಳಷ್ಟು ಸಹಕಾರಿಯಾಗಿದೆ. ನಾನು ಒಂದು ಬಡ ಕುಟುಂಬದಿಂದ ಬಂದವನು.
ನಾನು ಗೆದ್ದು ಬಂದರೆ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ದೇಶದ ಅಭಿವೃದ್ಧಿಗಾಗಿ ನಿಮ್ಮ ಅಮೂಲ್ಯವಾದ
ಮತವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿ ಅತೀ
ಹೆಚ್ಚಿನ ಮತಗಳಿಂದ ಗೆಲ್ಲಿಸಿ. ಎಂದು ಹೇಳಿದರು.
ಪ್ರಚಾರ ಸಮಿತಿ ಉಸ್ತುವಾರಿಯಾದ
ಬಿ.ರಮಾನಾಥ ರೈ ರವರು ಮತಯಾಚನೆ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಅಡ್ಪಂಗಾಯ, ಟಿ.ಎಂ.ಶಹೀದ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಮುಖಂಡರುಗಳಾದ ನಿತ್ಯಾನಂದ ಮುಂಡೋಡಿ, ಜಿ.ಕೃಷ್ಣಪ್ಪ, ಡಾ.ರಘು, ಎನ್.ಜಯಪ್ರಕಾಶ್ ರೈ, ವೆಂಕಪ್ಪ ಗೌಡ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಇಸಾಕ್ ಸಾಹೇಬ್ ಪಾಜಪಳ್ಳ,ಸದಾನಂದ ಮಾವಜಿ, ರಾಜೀವಿ ಆರ್.ರೈ, ಹಾಜಿರಾ ಕಲ್ಮಡ್ಕ,ಜಯರಾಮ ಭಟ್ ಬೆಟ್ಟ, ಶ್ರೇಯಂಸ್ ಕುಮಾರ್ ಶೆಟ್ಟಿಮೂಲೆ , ವಿಜಯಕುಮಾರ್ ಸೊರಕೆ,ತಿರುಮಲೇಶ್ವರಿ ಅರ್ಭಡ್ಕ, ಲೀಲಾ ಮನಮೋಹನ್, ಅಬ್ದುಲ್ ಗಫೂರ್, ಮಹೇಶ್ ಕುಮಾರ್ ಕರಿಕ್ಕಳ, ಲಕ್ಷ್ಮಣ ಗೌಡ ಬೊಳ್ಳಾಜೆ ,ಡಾ.ದೇವಿ ಪ್ರಸಾದ್ ಕಾನತ್ತೂರ್ ,ಇಸ್ಮಾಯಿಲ್ ಪಡ್ಪಿನಂಗಡಿ, ರಜಿತ್ ಭಟ್ ಪಂಜಬೀಡು,ಸತ್ಯನಾರಾಯಣ ಭಟ್ ಕಾಯಂಬಾಡಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಿ ಸಿ ಜಯರಾಮ್ ಸ್ವಾಗತಿಸಿದರು. ಭರತ್ ಮುಂಡೋಡಿ ವಂದಿಸಿದರು.