ಪ್ರಿಮಲ್ ವೆನಿಷಾ ಡಿ ಸೋಜಾ ಗೆ ಪಿಯುಸಿಯಲ್ಲಿ ಡಿಸ್ಟಿಂಕ್ಷನ್‌

0

ಈ ವರ್ಷ ನಡೆದ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ಮೂಡಬಿದ್ರೆ ಅಳ್ವಾಸ್ ಪಿ.ಯು.ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ, ಸುಳ್ಯದ ಪ್ರಿಮಲ್ ವೆನಿಷಾ ಡಿಸೋಜಾ 600ರಲ್ಲಿ 588(ಶೇ.98) ಅಂಕ ಪಡೆದು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಗಣಿತದಲ್ಲಿ ಶೇ.100 ಅಂಕ, ಜೀವಶಾಸ್ತ್ರದಲ್ಲಿ ಶೇ.100 ಅಂಕ ಗಳಿಸಿದ್ದಾರೆ.

ಮರಿಯಾಕೃಪಾ ಟ್ರಾನ್ಸ್‌ಪೋರ್ಟ್‌ ನ ಮಾಲಕ ಅಮರಮುಡ್ನೂರು ಗ್ರಾಮದ ಚಿಕ್ಕಿನಡ್ಕ ಪ್ರೇಮ್ ಪ್ರಕಾಶ್ ಮತ್ತು ಶ್ರೀಮತಿ ವೀಣಾ ಮೊಂತೆರೋ ದಂಪತಿಗಳ ಪುತ್ರಿಯಾಗಿರುವ ಪ್ರಿಮಲ್ ವನಿಷಾ ಡಿಸೋಜಾ ಸುಳ್ಯದ ಸೈಂಟ್ ಜೋಸೆಫ್‌ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿನಿ. ಎಸ್.ಎಸ್.ಎಲ್.ಸಿ.ಯಲ್ಲಿ 625 ರಲ್ಲಿ 624 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದರು.