ದೃಷ್ಟಿ ತೆಗೆದು, ಆರತಿ ಬೆಳಗಿ ಸ್ವಾಗತಿಸಿದ ಕಾಲನಿ ಮಹಿಳೆಯರು
ಕಾಲನಿ ಅಭಿವೃದ್ಧಿ ದೃಷ್ಟಿಯಿಂದ ಶಿಕ್ಷಣ ಅತೀ ಅಗತ್ಯ. ಆದ್ದರಿಂದ ಕಾಲನಿಯ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಕೆಲಸ ತಪ್ಪಿಸಬೇಡಿ. ಅಭಿವೃದ್ಧಿ ದೃಷ್ಟಿಯಿಂದ ಕಾಲನಿಗೆ ಆದ್ಯತೆ ನೀಡಲಾಗುವುದು ಏಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹೇಳಿದರು.
ಸುಳ್ಯದ ನಿಡುಪೆ ತಮಿಳು ಕಾಲನಿಗೆ ಭೇಟಿ ನೀಡಿ ಮಾತನಾಡಿದರು.
ಮಕ್ಕಳಿಗೆ ವಿದ್ಯಾಭ್ಯಾಸ, ದಾರಿ ದೀಪ, ಕುಡಿಯುವ ನೀರು ಮೊದಲಾದ ಮೂಲ ಸೌಕರ್ಯಗಳ ಅಗತ್ಯವಿರುವುದು ಗಮನಕ್ಕೆ ಬರುತ್ತದೆ ಎಂದರು.
ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರ ದೃಷ್ಟಿ ತೆಗೆದು, ಆರತಿ ಬೆಳಗಿ ಕಾಲನಿ ಮಹಿಳೆಯರು ಸ್ವಾಗತಿಸಿದರು.
ಇದೇ ಸಂದರ್ಭ ರಾಮ ಸ್ವಾಮಿ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು.
ಕಾಂಗ್ರೆಸ್ ಜಿಲ್ಲಾ ಚುನಾವಣಾ ಉಸ್ತುವಾರಿ ರಮಾನಾಥ ರೈ, ಪಿ.ಸಿ ಜಯರಾಂ, ವೆಂಕಪ್ಪ ಗೌಡ, ಜಯಪ್ರಕಾಶ್ ರೈ, ಶಾಫಿ ಕುತ್ತಮೊಟ್ಟೆ, ಕೆ. ರಾಜು ಪಂಡಿತ್, ಚಂದ್ರಲಿಂಗಂ, ಶಿವಕುಮಾರ್ ಮೊದಲಾದವರು ಉಪಸ್ಥಿತರಿದ್ದರು