ಅಂಬಟೆಡ್ಕ ರಸ್ತೆಯ ಚೆನ್ನಕೇಶವ ವೃತ್ತದ ಬಳಿ ಪೈಪ್ ಲೈನ್ ಕಾಮಗಾರಿ ಕೆಲಸ ನಡೆಯುತ್ತಿದ್ದು ರಸ್ತೆಯ ಬದಿ ಜೆ.ಸಿ.ಬಿ ಬಳಸಿ ಗುಂಡಿ ತೆಗೆದ ಕಾರಣದಿಂದ ವಾಹನ ಸಂಚಾರಕ್ಕೆ ಅಡಚಣೆಯುಂಟಾಗುತ್ತಿದೆ.ಈ ರಸ್ತೆಯ ಮೂಲಕ ಕೆ.ವಿ.ಜಿ ಕ್ಯಾಂಪಸ್ ಮತ್ತು ತಾಲೂಕು ಕಚೇರಿ ಹಾಗೂ ಮದುವೆ ಹಾಲ್ ಗೆ ಸಂಪರ್ಕ ರಸ್ತೆಯಾಗಿರುವ ಕಾರಣಕ್ಕೆ ವಾಹನ ದಟ್ಟಣೆ ಅಧಿಕವಾಗಿದ್ದುದರಿಂದ ಮಧ್ಯಾಹ್ನ ವೇಳೆಯಲ್ಲಿ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಕಿರಿ ಕಿರಿಅನುಭವಿಸುವಂತಾಯಿತು.