ಲೋಕಸಭಾ ಚುನಾವಣೆ ಎ.26ರಂದು ನಡೆಯಲಿದ್ದು, ನಡೆದಾಡಲು ಹಾಗೂ ಸರತಿ ಸಾಲಲ್ಲಿ ನಿಲ್ಲಲು ಅಶಕ್ತರಾಗಿರುವ ಹಿರಿಯರು ಮತ್ತು ವಿಶೇಷಚೇತನರ ಮನೆಗಳಿಗೆ ಹೋಗಿ ಮತದಾನ ಮಾಡಿಸುವ ಪ್ರಕ್ರಿಯೆ ಎ.15ರಂದು ಆರಂಭಗೊಂಡಿದೆ. ಎ.16ರಂದು ಮುಂದುವರಿಯಲಿದೆ.
ಸುಳ್ಯ ಕ್ಷೇತ್ರದಲ್ಲಿ 337ಮಂದಿ ವಿಶೇಷ ಚೇತನರು ಹಾಗೂ 701 ಮಂದಿ ಹಿರಿಯ ನಾಗರಿಕರು ಮತದಾನ ಮಾಡಲಿದ್ದಾರೆ.
ಇಂದು ಬೆಳಗ್ಗೆ ಯಿಂದ ಪ್ರಕ್ರಿಯೆ ಆರಂಭಗೊಂಡಿದ್ದು ಒಟ್ಟು 23 ತಂಡಗಳು ಕ್ಷೇತ್ರದಲ್ಲಿ ತಿರುಗಾಟ ನಡೆಸುತ್ತಿದೆ. ಮತದಾನ ಪ್ರಕ್ರಿಯೆಯ ವೀಡಿಯೋ ಚಿತ್ರಿಕರಣವನ್ನು ಮಾಡಲಾಗುತ್ತದೆ.