ಗ್ರಾಮೀಣ ಪ್ರತಿಭೆಗಳ ಕಲೆಯ ಅನಾವರಣವು ಶಿಬಿರದಿಂದ ಈಡೇರಿದೆ, ರಂಗ ಕಲಿಕೆಯಿಂದ ಅದ್ಭುತ ಕಲಾ ಶಕ್ತಿ ಪ್ರಾಪ್ತಿಯಾಗುವುದು : ಗೀತಾ ಸುರತ್ಕಲ್
ಬಣ್ಣ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳ ಪ್ರತಿಭೆಯು ಕಾಮನ ಬಿಲ್ಲಿನ ಬಣ್ಣದಂತೆ ಹೊಳಪುವಂತಾಗಲಿ : ಈರಯ್ಯ ದೂಂತೂರು
ಸುಳ್ಯ ಕಾಯರ್ತೋಡಿ ಮಹಾವಿಷ್ಣು ದೇವಳದ ವಠಾರದಲ್ಲಿ ಜರುಗಿದ 9 ದಿನಗಳ ರಾಜ್ಯ ಮಟ್ಟದ ಬೇಸಿಗೆ ಶಿಬಿರ ಬಣ್ಣ 2024 ರ ಸಮಾರೋಪ ಸಮಾರಂಭವು ಶ್ರೀ ಮಹಾವಿಷ್ಣು ಸಭಾಭವನದಲ್ಲಿ ಎ.17 ರಂದು ನಡೆಯಿತು.
ಮುಖ್ಯ ಅಭ್ಯಾಗತರಾಗಿ ರಂಗಭೂಮಿ ನಿರ್ದೇಶಕಿ, ಹಿರಿಯ ನಟಿ ಗೀತಾ ಸುರತ್ಕಲ್, ಸುಳ್ಯ ಪೋಲಿಸ್ ಉಪ ನಿರೀಕ್ಷಕ ಈರಯ್ಯ ದೂಂತೂರು, ಹಿರಿಯ ಉದ್ಯಮಿ ಕೃಷ್ಣ ಕಾಮತ್ ಅರಂಬೂರು, ಕರ್ನಾಟಕ ಕಿಕ್ ಬಾಕ್ಸಿಂಗ್ ಅಸೋಸಿಯೇಷನ್ ತಾಂತ್ರಿಕ ನಿರ್ದೇಶಕ ವಿನೋದ್ ಕರ್ಕೇರ, ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ, ಶಿಬಿರದ ನಿರ್ದೇಶಕ ಲೋಕೇಶ್ ಊರುಬೈಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆರಂಭದಲ್ಲಿ
ಕಲಾ ಶಾಲೆಯ ಹಿರಿಯ ವಿದ್ಯಾರ್ಥಿಗಳು ಸಂವಿಧಾನ ಪೀಠಿಕೆಯ ಗೀತೆಯನ್ನು ಪ್ರಸ್ತುತ ಪಡಿಸಿದರು.
ಕು.ವೈಷ್ಣವಿ ಸ್ವಾಗತಿಸಿದರು. ಶಿವಪ್ರಸಾದ್ ಆಲೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಕಲಾ ಶಾಲೆಯ ನಿರ್ದೇಶಕ ಲೋಕೇಶ್ ಊರುಬೈಲು ವಂದಿಸಿದರು. ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು.
ಪೋಷಕ ಕಮಿಟಿ ಸದಸ್ಯರು ಸಹಕರಿಸಿದರು. ವಿದ್ಯಾರ್ಥಿಗಳ ಪೋಷಕ ರು ಭಾಗವಹಿಸಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನವಾಯಿತು.