ಮತದಾನ ಜಾಗೃತಿಗಾಗಿ ಸುದ್ದಿ ಮತದಾರರ ಕಡೆಗೆ

0

ಪಂಜದಲ್ಲಿ ಸುದ್ದಿ ಚುನಾವಣಾ ಕುರುಕ್ಷೇತ್ರ

ಕ್ಷೇತ್ರದ ಅಭಿವೃದ್ಧಿ ಕುರಿತು ವಾದ ಮಂಡಿಸಿದ ಬಿಜೆಪಿ, ಕಾಂಗ್ರೆಸ್ ನಾಯಕರು

ನಾಯಕರನ್ನು ಪ್ರಶ್ನಿಸಿದ ಸಾಮಾಜಿಕ ಹೋರಾಟಗಾರರು

ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾನ ಜಾಗೃತಿಗಾಗಿ ಸುದ್ದಿಯ ವತಿಯಿಂದ “ಚುನಾವಣಾ ಕುರುಕ್ಷೇತ್ರ ” ಎಂಬ ವಿನೂತನ ಕಾರ್ಯಕ್ರಮ ಪಂಜದಲ್ಲಿ ಇಂದು ಚಿತ್ರೀಕರಣಗೊಂಡಿತು.

ಬಿಜೆಪಿ‌ , ಕಾಂಗ್ರೆಸ್ ನಾಯಕರು ಪಾಲ್ಗೊಂಡು ತಮ್ಮ ಅಭಿಪ್ರಾಯ ಮಂಡಿಸಿದರು. ಅಭಿವೃದ್ಧಿ, ರಾಷ್ಟ್ರೀಯತೆ, ರೈಲ್ವೆ, ಕೃಷಿಕರ ಸಮಸ್ಯೆ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಯಿತು. ಅಭಿವೃದ್ದಿ ವಿಚಾರಗಳ‌ ಕುರಿತು ಮತದಾರರು ನಾಯಕರನ್ನು ಪ್ರಶ್ನಿಸಿದರು.

ಚಂದ್ರಶೇಖರ ಶಾಸ್ತ್ರಿ ಗಂಗಾಧರ ಗುಂಡಡ್ಕ, ಲಿಗೋಧರ ಆಚಾರ್ಯ, ಲಕ್ಷ್ಮಣ ಗೌಡ ಬೊಳ್ಳಾಜೆ, ಶಶಿಕಲಾ ಸೂಂತಾರು, ಪುರುಷೋತ್ತಮ ಮುಡೂರು, ರಫೀಕ್ ಸಿ ಎಂ ಐವತ್ತೊಕ್ಲು , ವಿನೋದ್ ಬೊಳ್ಮಲೆ, ಗಣೇಶ್ ಭೀಮಗುಳಿ, ನಿರ್ಮಲಾ ಪಲ್ಲೋಡಿ, ರಾಮದಾಸ್ ಆಳ್ವ, ಚಂದ್ರಾವತಿ ಹೊನ್ನಪ್ಪ ಚಿದ್ಗಲ್ , ನಾರಾಯಣ ಕೃಷ್ಣನಗರ , ಚಂದ್ರಶೇಖರ ದೇರಾಜೆ ಜಗದೀಶ್ ಪುರಿಯ, ಲೋಕೇಶ್ ಬರೆಮೇಲು, ನೇತ್ರಾವತಿ ಕಲ್ಲಾಜೆ, ಲಕ್ಷ್ಮಣ ಗೌಡ ಕುಳ್ಳ ಕೋಡಿ, ನಂದಕುಮಾರ್ ಗಟ್ಟಿಗಾರು, ಜಯರಾಮ ಕಂಬಳ, ಸೋಮಶೇಖರ ನೇರಳ, ವೆಂಕಪ್ಪ , ಜಮಲುದ್ದಿನ್ , ಇಸ್ಮಾಯಿಲ್ ಪೊಳೆಂಜ , ವಿಜಯ ಭಟ್ , ಜಿನ್ನಪ್ಪ ಕೋಟ್ಯಡ್ಕ,ರಾಜೇಶ್ ಪಲ್ಲೋಡಿ , ರವಿ ಕುಮಾರ್ ನರಿಯಂಗ ,ಬೆಳ್ಯಪ್ಪ ಗೌಡ, ದಿನೇಶ್ ಪುಂಡಿಮನೆ , ಕುಸುಮಾಧರ ಕೆರೆಯಡ್ಕ, ಮಹಮ್ಮದ್ ಯನ್,ವಸಂತ ಕೋಡಿ, ಕೃಷ್ಣಪ್ಪ ಗೌಡ, ಭುವನೇಂದ್ರ ಕೆ , ಪುಷ್ಪರಾಜ್ , ಮನೋಜ್,ಮಾಧವ, ಜಯಂತ ಕುಳ್ಳಕೋಡಿ, ಕೇಶವ , ಹೊನ್ನಪ್ಪ, ಜನಾರ್ದನ, ಕೇಶವ ಕೆರೆಕ್ಕೋಡಿ ಮೊದಲಾದವರು ಉಪಸ್ಥಿತರಿದ್ದರು.

ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಕಾರ್ಯಕ್ರಮ‌ ನಡೆಸಿಕೊಟ್ಟರು. ವರದಿಗಾರರಾದ ಈಶ್ವರ ವಾರಣಾಸಿ, ಮಧು ಪಂಜ
ಸುದ್ದಿ ಚಾನೆಲ್ ನ ರಕ್ಷಿತ್ ಕುಕ್ಕುಜಡ್ಕ, ಕೌಶಿಕ್ ಬಳ್ಳಕ್ಕ ಸಹಕರಿಸಿದರು.