ಕಾಂಗ್ರೆಸ್ ಸರಕಾರದಿಂದ ಅಭಿವೃದ್ಧಿ ಅನುದಾನವಿಲ್ಲ : ಜಾತಿಗಳ ಮಧ್ಯೆ ಕಂದಕ ಸೃಷ್ಠಿಸಿ ಕಾಂಗ್ರೆಸ್
ಸೌಜನ್ಯ ಪ್ರಕರಣ ನಮಗೂ ನೋವಿದೆ : ಬಿಜೆಪಿ ಮತ ಬೇರ್ಪಡಿಸಲು ನೋಟಾ ಅಭಿಯಾನ
ಲೋಕಸಭಾ ಚುನಾವಣೆಗೆ ಬಿಜೆಪಿ ಸುಳ್ಯ ಕ್ಷೇತ್ರದಲ್ಲಿ 233 ಬೂತ್ ಗಳಲ್ಲಿ 2 ಸುತ್ತಿನ ಮನೆ ಮನೆ ಭೇಟಿ ನಡೆಸಿ ಮತದಾರರನ್ನು ತಲುಪುವ ಕೆಲಸ ಪಕ್ಷದ ಕಡೆಯಿಂದ ಆಗಿದೆ. ಎ.21ರಂದು ಕ್ಷೇತ್ರಾದ್ಯಂತ ಮಹಾ ಸಂಪರ್ಕ ಅಭಿಯಾನ ನಡೆಸುವ ಮೂಲಕ ಮೂರನೇ ಸಲವೂ ಮತದಾರರನ್ನು ಭೇಟಿಯಾಗಿ ಕೇಂದ್ರ ಸರಕಾರದ ಯೋಜನೆಯನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಲಿವೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದರು.
ಎ.೧೯ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಚುನಾವಣೆ ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್ ಇಲ್ಲಸಲ್ಲದ ಆರೋಪ ಮಾಡುತ್ತಿದೆ. 60 ವರ್ಷದಲ್ಲಿ ಕಾಂಗ್ರೆಸ್ ಸಾಧನೆ ಶೂನ್ಯ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ ಮೋದಿ ಸರಕಾರ ಕಳೆದ 10 ವರ್ಷದಲ್ಲಿ ಸರ್ವಾಂಗೀಣ ಅಭಿವೃದ್ಧಿ ಗೆ ಆದ್ಯತೆ ನೀಡಿದೆ. ಚುನಾವಣಾ ಸಂದರ್ಭ ನೀಡಿದ ಪ್ರಣಾಳಿಕೆಯನ್ನು ಶೇ.100 ಈಡೇರಿಕೆ ಆಗಿದೆ. ನಮ್ಮ ಸರಕಾರ ಹಳ್ಳಿ ಹಳ್ಳಿಗೆ ವಿದ್ಯುತ್ ಸೌಲಭ್ಯ ಒದಗಿಸಿದೆ. ಜೆಜೆಎಂ ಯೋಜನೆ ಮೂಲಕ ಪ್ರತೀ ಮನೆಗೆ ಕುಡಿಯು ನೀರಿನ ಸಂಪರ್ಕ ನೀಡಿದೆಯಲ್ಲದೆ ಎಲ್ಲ ವರ್ಗದ ಜನರಿಗೆ ಸಿಗುವಂತ ಯೋಜನೆಯನ್ನು ಜಾರಿಗೊಳಿಸಿ ಅದು ಜನರಿಗೆ ತಲುಪುವಂತೆ ಆಗಿದೆ ಎಂದು ಹೇಳಿದರು. ಮೋದಿಯವರು ಈ ಚುನಾವಣೆಯಲ್ಲಿ ಭಾರತದ ಅಭಿವೃದ್ಧಿಯ ಬಗ್ಗೆ ಮಾಸ್ಟರ್ ಪ್ಲ್ಯಾನ್ ಈಗಾಗಲೇ ಸಿದ್ಧಗೊಳಿಸಿದ್ದು, ವಿಕಸಿತ ಭಾರತವೇ ಬಿಜೆಪಿಯ ಕಲ್ಪನೆ ಎಂದು ಹೇಳಿದರು.
ರಾಜ್ಯದ ಕಾಂಗ್ರೆಸ್ ಸರಕಾರ ಬಿಟ್ಟಿ ಭಾಗ್ಯಗಳನ್ನು ನೀಡುತಿದ್ದು ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ನೌಕರರಿಗೆ ಸಂಬಳ ಸಿಗುತ್ತಿಲ್ಲ. ಅಂಗನವಾಡಿ ಮಕ್ಕಳಿಗೆ ಪೌಷ್ಠಿಕ ಆಹಾರವು ಸರಿಯಾಗಿ ಸರಬರಾಜಾಗದ ಸ್ಥಿತಿ ಇದೆ. ಫ್ರೀ ವಿದ್ಯುತ್ ಎಂದು ಹೇಳುವ ಸರಕಾರ ನಿರಂತರವಾಗಿ ಪವರ್ ಕಟ್ ಮಾಡುತ್ತಿದೆ. 10 ಕೆ.ಜಿ. ಅಕ್ಕಿ ನೀಡುವುದಾಗಿ ಹೇಳಿದ ಕಾಂಗ್ರೆಸ್ ಈಗಲೂ ಕೂಡಾ ಕೇಂದ್ರ ಸರಕಾರ ನೀಡುವ ಅಕ್ಕಿಯನ್ನೇ ನೀಡುತ್ತಿದೆಯೇ ಹೊರತು ಅವರು ಹೇಳಿದ 10 ಕೆ.ಜಿ. ಅಕ್ಕಿ ಇನ್ನೂ ವಿತರಣೆ ಆಗಿಲ್ಲ. ಹುಬ್ಬಳ್ಳಿಯಲ್ಲಿ ಹಾಡಹಗಲೇ ನೇಹಾ ಎಂಬ ಯುವತಿಯ ಹತ್ಯೆ ಆಗಿದೆ. ಇದರಿಂದ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟಿದೆ ಂಬುದು ಗೊತ್ತಾಗುತ್ತಿದೆ ಎಂದು ಹೇಳಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ ಮಾತನಾಡಿ, ಬಿಜೆಪಿ ಕೋಮುವಾದಿ ಪಕ್ಷ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ಆದರೆ ಇವರು ಮಾಡಿನು? ಬಿಲ್ಲವ ಸಮುದಾಯದ ಪ್ರವೀಣ್ ಪೂಜಾರಿಯನ್ನು ಹತ್ಯೆ ಮಾಡಿದ ಎಸ್‌ಡಿಪಿಐ ಜತೆ ಈ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿದ್ದು ಯಾಕೆ?. ಜಾತಿ ಜಾತಿಗಳ ಕಂದಕವನ್ನು ಕಾಂಗ್ರೆಸ್ ಸೃಷ್ಠಿಸುತ್ತಿರುವುದು ನಾವು ನೋಡುತಿವೆ'' ಎಂದು ಹೇಳಿದ ಅವರು, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿಗೆ ಅನುದಾನವನ್ನೇ ನೀಡಿಲ್ಲ. ಕಳೆದ 9 ತಿಂಗಳಿನಿಂದ ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಎಷ್ಟು ಅನುದಾನ ಸರಕಾರ ನೀಡಿದೆ ಎನ್ನುವ ಪಟ್ಟಿ ಅವರು ಬಿಡುಗಡೆ ಮಾಡಲಿ ಎಂದು ಸವಾಲೆಸೆದರಲ್ಲದೆ, ಈ ಚುನಾವಣೆಯ ಸಂದರ್ಭ ಮನೆ ಮನೆಗೆ ತೆರಳುವ ಕಾಂಗ್ರೆಸ್ ಕಾರ್ಯಕರ್ತರು ಆಧಾರ್ ನಂಬರ್ ಪಡೆಯುವ ಮೂಲಕ ಹಣ ಬರುತ್ತದೆ ಎಂದು ಆಮಿಷ ಒಡ್ಡುತ್ತಿದ್ದಾರೆ.
ಇದು ಚುನಾವಣಾ ನೀತಿ ಸಂಹಿತೆಗೆ ವಿರೋಧ. ಇದು ಹೀಗೆ ಮುಂದುವರಿದರೆ ಚುನಾವಣಾ ಆಯೋಗಕ್ಕೆ ದೂರು ನೀಡಬೇಕಾಗುತ್ತದೆ'' ಎಂದು ಹೇಳಿದರು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ, ಚುನಾವಣಾ ಪ್ರಭಾರಿ ರವೀಂದ್ರ ಉಳಿದೊಟ್ಟು ಮಾತನಾಡಿಚುನಾವಣೆಯ ಈ ಸಂದರ್ಭದಲ್ಲಿ ಕಾಂಗ್ರೆಸ್ ನವರು ಕೀಳು ಮಟ್ಟದ ರಾಜಕೀಯ ಮಾಡುತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ನರೇಂದ್ರ ಮೋದಿ ಸರಕಾರ ಜನಪರ ಆಡಳಿತ ನೀಡುತ್ತಿದೆ. ಅವರ ಆಡಳಿತ ಕ್ರಮವನ್ನು ವಿಶ್ವವೇ ನೆಚ್ಚಿಕೊಂಡಿರುವಾಗ, ಕೇವಲ ಕಾಹೀರಾತು ಮೂಲಕ ಕೆಟ್ಟ ರಾಜಕೀಯ ಕಾಂಗ್ರೆಸ್‌ಗೆ ಶೋಭೆ ತರುವಂತದ್ದಲ್ಲ. ರಾಜ್ಯದ ಜನರು ಪ್ರಜ್ಞಾವಂತರಿದ್ದು ಕೇಂದ್ರ ಸರಕಾರದ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿ ಯಾಗಲು ಎಲ್ಲರೂ ಬಿಜೆಪಿಯನ್ನೇ ಬೆಂಬಲಿಸುತ್ತಾರೆ ಎಂದು ಹೇಳಿದರು.
ಉಪಸ್ಥಿತರಿದ್ದರು.
ಸೌಜನ್ಯ ಹತ್ಯೆಗೆ ನ್ಯಾಯ ಸಿಕ್ಕಿಲ್ಲ ಎನ್ನುವುದು ನಮಗೆ ನೋವಿದೆ. ಅವರು ಕುಟುಂಬದ ಜತೆ ನಾವು ಎಂದಿಗೂ ಇವೆ. ಇದಕ್ಕೆ ನೋಟಾ ಅಭಿಯಾನ ಸೂಕ್ತ ಪರಿಹಾರ ವ್ಯವಸ್ಥೆ ಅಲ್ಲ. ಬಿಜೆಪಿ ಮತವನ್ನು ಬೇರ್ಪಡಿಸುವ ನಿಟ್ಟಿನಲ್ಲಿ ಅಭಿಯಾನ ನಡೆಯುತ್ತಿರುವುದು ನಮಗೆ ಗೊತ್ತಾಗಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಬಿಜೆಪಿ ನಾಯಕರು ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಪ್ರಭಾರಿ ಅಪ್ಪಯ್ಯ ಮಣಿಯಾಣಿ, ಬಿಜೆಪಿ ಪ್ರಮುಖರಾದ ಕುಸುಮಾಧರ ಎ.ಟಿ., ಶಿವಪ್ರಸಾದ್ ನಡುತೋಟ, ಪ್ರದೀಪ್ ರೈ ಮನವಳಿಕೆ, ಸುಭೋದ್ ಶೆಟ್ಟಿ ಮೇನಾಲ, ಹೇಮಂತ್ ಮಠ, ಚಂದ್ರಜಿತ್ ಮಾವಂಜಿ, ಸುದರ್ಶನ ಪಾತಿಕಲ್ಲು, ಪ್ರದೀಪ್ ಕೊಲ್ಲರಮೂಲೆ