ಗುತ್ತಿಗಾರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರಿಂದ ಪಾದಯಾತ್ರೆ ಮೂಲಕ ಮತಯಾಚನೆ

0

ನನ್ನನ್ನು ಆರಿಸಿ ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತಿರುತ್ತೇನೆ: ಪದ್ಮರಾಜ್

ಕಾಂಗ್ರೆಸ್ ಸೇರ್ಪಡೆ

ದಕ್ಷಿಣ ಕನ್ನಡ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರ ಪಾದಯಾತ್ರೆ ಮತ್ತು ಬಹಿರಂಗ ಸಭೆ‌ ಗುತ್ತಿಗಾರಿನಲ್ಲಿ ನಡೆಯಿತು.

ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರು ಮಾತನಾಡಿ ಕಾಂಗ್ರೆಸ್ ಪಕ್ಷ ಪಂಚ ಗ್ಯಾರಂಟಿಗಳನ್ನು ಜನರಿಗೆ ನೀಡುವುದರ ಮೂಲಕ ಬಡಜನರಿಗೆ ಸಹಾಯ ಮಾಡಿದೆ. ಬಿಜೆಪಿಗೆ ಸೋಲಿನ ಭೀತಿ ಪ್ರಾರಂಭಗೊಂಡಿದ್ದು, ನಮ್ಮ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ.


ದೇಶ ಅಭಿವೃದ್ಧಿ ಆಗ ಬೇಕಾದ್ರೆ ನಮ್ಮ ಮಕ್ಕಳಿಗೆ ಉದ್ಯೋಗ ಲಭಿಸಬೇಕು. ಈಗ ನಾವು ಯಾರನ್ನೂ ದೂರುವ ಅವಶ್ಯಕತೆ ಇಲ್ಲ. ಐದು ಗ್ಯಾರಂಟಿ ನೀಡಿದ ಸಂದರ್ಭ ಬೋಗಸ್ ಎಂದವರು ಈಗ ಅದನ್ನು ನಂಬಿದ್ದಾರೆ. ನುಡಿದಂತೆ ನಡೆದ ಪಕ್ಷ ಇದ್ದರೆ ಅದು ಕಾಂಗ್ರೆಸ್. ಬಡವರ ಪಾಲಿಗೆ ಇರುವ ಪಕ್ಷ ಕಾಂಗ್ರೆಸ್, ಗೃಹಣಿಗೆ ತಿಂಗಳಿಗೆ ಎರಡು ಸಾವಿರ ಸಿಕ್ತದೆ ಅದು ಸಂಸಾರ ಸರಿದೂಗಿಸಲು ಸಹಕಾರಿಯಾಗುತ್ತಿದೆ. ನಮ್ಮ ಗ್ಯಾರಂಟಿ ನಂಬಿ ಕಾಂಗ್ರೆಸ್‌ಗೆ ಮತದಾನ ಮಾಡಿ. ನಮ್ಮಲ್ಲಿ ಪಾಕೃತಿಕ ಸಂಪತ್ತು ಉಪಯೋಗಿಸಿ ಟೂರಿಸಂ ಅಭಿವೃದ್ಧಿ ಪಡಿಸಿದರೆ ಉದ್ಯೋಗ ಸೃಷ್ಟಿ ಆಗುತ್ತದೆ ಎಂದರು. ಬಿಜೆಪಿ ಆರ್ಥಿಕವಾಗಿ ಹಿಂದುಳಿದವರ ಮನ ಕೆಡಿಸಿ ಬೇರೆ ಬೇರೆ ಅಪಪ್ರಚಾರ ಮಾಡಿ ಯುವಕರ ಮನ ಕೆಡಿಸಲು ಪ್ರಯತ್ನಿಸುತ್ತದೆ. ಸಂವಿಧಾನದನವನ್ನೇ ಅಲುಗಾಡಿಸುವಲ್ಲಿ ತಯಾರಿ ನಡೆಸಿದೆ. ಬಿಜೆಪಿಯ ಕಾರ್ಯಕರ್ತರಿಗೂ ಈ ಸತ್ಯ ಅರಿವಾಗಲು ಆರಂಭವಾಗಿದೆ ಬಿಜೆಪಿ ತನ್ನ ಬತ್ತಳಿಕೆಯಲ್ಲಿ ಪವಿತ್ರ ಗ್ರಂಥ, ಕರಿಮಣಿ ಮುಟ್ಟಿಸಿ ಪ್ರಮಾಣ ಮಾಡಿ ಓಟು ಕೇಳುವ ಹಂತಕ್ಕೆ ಬರುತ್ತಿರುವ ಮಾಹಿತಿ ಇದೆ ಎಂದು ಹೇಳಿದರು . ಈ ಭಾಗದ ಕೃಷಿ ಅಡಿಕೆ, ರಬ್ಬರ್ ಮತ್ತಿತರರ ಕೃಷಿಯ ತೊಂದರೆಗೆ ಶಾಶ್ವತ ಪರಿಹಾರ ಒದಗಿಸಲು ಶ್ರಮಿಸುವೆ. ನನ್ನನ್ನು ಆರಿಸಿ ನಿಮ್ಮ ಧ್ವನಿಯಾಗಿ ಕೆಲಸ ಮಾಡುತ್ತಿರುತ್ತೇನೆ ಎಂದರು.

ಹರೀಶ್ ಕುಮಾರ್, ಮಮತಾ ಗಟ್ಟಿ, ಕೃಷ್ಣಪ್ಪ, ಪಿ.ಸಿ ಜಯರಾಮ, ನಿತ್ಯಾನಂದ ಮುಂಡೋಡಿ, ಭರತ್ ಮುಂಡೋಡಿ, ಅಶೋಕ ಎಡಮಲೆ, ಸರಸ್ವತಿ ಕಾಮತ್, ರಘು, ರಾಜೀವಿ ರೈ, ಪರಮೇಶ್ವರ ಕೆಂಬಾರೆ, ವಿಜಯಕುಮಾರ್ ಸೊರಕೆ, ಜಯಪ್ರಕಾಶ್ ರೈ, ಕಿರಣ್ ಬುಡ್ಲೆಗುತ್ತು, ಗಿರೀಶ್ ಕೊರ್ಬಟ, ದಿನೇಶ್ ಹಾಲೆಮಜಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖಂಡರಾದ ರವೀಂದ್ರ ಕುಮಾರ್ ರುದ್ರಪಾದ, ಪರುಶುರಾಮ ಚಿಲ್ತಡ್ಕ, ರಾಧಾಕೃಷ್ಣ ಬೊಳ್ಳೂರು, ವಹಿದಾ ಇಸ್ಮಾಯಿಲ್, ಪ್ರವೀಣ್ ಮುಂಡೋಡಿ, ವೆಂಕಪ್ಪ ಗೌಡ, ಮಿತ್ರದೇವ, ಕೆ.ಪಿ ಜಾನಿ ಮತ್ತಿತರರು ಉಪಸ್ಥಿತರಿದ್ದರು. ಸಭೆಯಲ್ಲಿ ಹರೀಶ್ ಪೈಕ, ವಿಶ್ವನಾಥ ಹೊಸೋಳಿಕೆ, ನಾಗೇಶ್ ವರ್ಪಾರೆ, ಧರ್ಮಪಾಲ ಸಂಪ್ಯಾಡಿ, ಕೋಟೆ ಮೈಲ ಸಂಘದ ಅಧ್ಯಕ್ಷ ಕುಮಾರ್ ಬಳ್ಳಕ್ಕ, ಬಾಬು ಹೆಬ್ಬಾರ ಹಿತ್ಲು, ಐತ್ತಪ್ಪ ಬಳ್ಳಕ್ಕ, ಭೋಜ ಹೆಬ್ಬಾರ ಹಿತ್ಲು ಮತ್ತಿತರರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದು ಕಾಂಗ್ರೆಸ್ ಧ್ವಜ ನೀಡಿ ಬರಮಾಡಿಕೊಳ್ಳಲಾಯಿತು.