ಬಿಜೆಪಿ ಸರಕಾರದ ಸಾಧನೆ ಕಾಂಗ್ರೆಸ್ ಗೆ ಸಹಿಸಲು ಸಾಧ್ಯವಾಗದೇ ಬಿಜೆಪಿ ವಿರುದ್ಧ ಆರೋಪ

0

ಈ ಬಾರಿ ಬಿಜೆಪಿ ಅಭ್ಯರ್ಥಿಗೆ ಸುಳ್ಯ ಕ್ಷೇತ್ರದಲ್ಲಿ 60 ಸಾವಿರ ಲೀಡ್: ಮಾಜಿ ಸಚಿವ ಎಸ್.ಅಂಗಾರ ವಿಶ್ವಾಸ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭಿವೃದ್ಧಿ ಆಧಾರದಲ್ಲೇ ಮತ ಯಾಚನೆ ಮಾಡುತಿದ್ದು ಈ ಭಾರಿಯೂ ನಮ್ಮ ಅಭ್ಯರ್ಥಿ ಕಳೆದ ಬಾರಿಯ ಮತಗಳಿಂದಲೂ ಹೆಚ್ಚು ಲೀಡ್ ಪಡೆದು ಗೆಲುವು ಸಾಧಿಸಲಿದ್ದಾರೆ. ಬಿಜೆಪಿ ಸರಕಾರದ ಸಾಧನೆ ಸಹಿಸಲು ಸಾಧ್ಯವಾಗದ ಕಾಂಗ್ರೆಸ್ ಬಿಜೆಪಿ ವಿರುದ್ಧ ಆರೋಪ ಮಾಡುತಿದೆ ಎಂದು ಮಾಜಿ ಸಚಿವ ಎಸ್.ಅಂಗಾರ ಹೇಳಿದರು.

ಎ.20ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ಸುಳ್ಯ ವಿಧಾನಸಭಾ ಕ್ಷೇತ್ರದ ವಿವಿಧ ಭಾಗದಲ್ಲಿ ಚುನಾವಣಾ ಪ್ರಚಾರ ನಡೆಸಿದ ಸಂದರ್ಭ ಕಳೆದ ಬಾರಿಗಿಂತಲೂ ಹೆಚ್ಚಿಗೆ ಜನರು ಬಿಜೆಪಿಯ ಮೇಲೆ ಒಲವು ವ್ಯಾಪಕವಾಗಿ ವ್ಯಕ್ತವಾಗುತ್ತಿದೆ. ಸರಕಾರದ ಅಭಿವೃದ್ಧಿ ಜನರ ಮನ ಮುಟ್ಟಿದೆ” ಎಂದು‌ ಹೇಳಿದರು.

ಬಿಜೆಪಿಯವರು ಭಾವನಾತ್ಮಕ ವಾಗಿ ಜನರ ಮುಂದೆ ಹೋಗುತಿದ್ದಾರೆ ಎಂದು ಕಾಂಗ್ರೆಸ್ ಹೇಳುತಿದ್ದು ಅವರ ಮಾತನ್ನು ನಾವು ಖಂಸುತ್ತೇವೆ. ನಾವು ಭಾವನಾತ್ಮಕ ವಾಗಿಯೂ ಎಲ್ಲಿಯೂ ಮತ ಕೇಳಿಲ್ಲ. ಅಭಿವೃದ್ಧಿಯ ಆಧಾರದಲ್ಲೇ ಮತಯಾಚನೆ ಮಾಡುತಿದ್ದೇವೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿದ್ದು ನಮ್ಮ ಸಾಧನೆ. ಕಾಂಗ್ರೆಸ್ ನವರು ಅವರ ಅವಧಿಯಲ್ಲಿ ಯಾಕೆ ಮಾಡಿಲ್ಲ. ಮಾಡಬಹುದಿತ್ತಲ್ಲವೇ ಎಂದು ಅವರು ಪ್ರಶ್ನಿಸಿದರು.

ಅಟಲ್ ಬಿಹಾರಿ ವಾಜಪೇಯಿ ಯವರು ಪ್ರಧಾನಿಯಾದ ಬಳಿಕ ಪಿಎಂಜಿಎಸ್ ವೈ ಯೋಜನೆಯ ಮೂಲಕ ರಸ್ತೆಗಳ ಅಭಿವೃದ್ಧಿ ಗೆ ವಿಶೇಷ ಮುತುವರ್ಜಿ ವಹಿಸಿ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ಗೆ ಆದ್ಯತೆ ನೀಡಿದರು. ಬಳಿಕ ಬಂದ ಯುಪಿಎ ಸರಕಾರ ಈ ವ್ಯವಸ್ಥೆಯನ್ನು ನಿಲ್ಲಿಸಿತು. ಕಳೆದ 10 ವರ್ಷಗಳ ಹಿಂದ ಆಡಳಿತಕ್ಕೆ ಬಂದ ನರೇಂದ್ರ ಮೋದಿಯವರ ಸರಕಾರ ಮತ್ತೆ ಈ ಯೋಜನೆಗೆ ಆದ್ಯತೆ ನೀಡಿ ರಸ್ತೆಗಳ ಅಭಿವೃದ್ಧಿ ಯಾದವು. ಸುಳ್ಯಕ್ಷೇತ್ರದಲ್ಲಿ 24ಕ್ಕೂ ಅಧಿಕ ರಸ್ತೆಗಳು ಸುಸಜ್ಜಿತಗೊಂಡಿರುವುದು ಇದೇ ಯೋಜನೆಯಲ್ಲಿ. ಅಲ್ಲದೆ 21 ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿ ಮಾಡಲಾಗಿದೆ ಎಂದು ಮಾಜಿ ಶಾಸಕರು ವಿವರ ನೀಡಿದರು.

1994ರ ಬಳಿಕ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿ ಮಾತ್ರವಲ್ಲದೆ, 148 ಸೇತುವೆಗಳ ಅಭಿವೃದ್ಧಿ ಮಾಡಲಾಗಿದೆ. ಮೂಲಭೂತ ಸೌಕರ್ಯಗಳಿಗೂ ಆದ್ಯತೆ ನೀಡಲಾಗಿದೆ. ಬಿಜೆಪಿ ಮಾಡಿದ ಅಭಿವೃದ್ಧಿ ಕಾಂಗ್ರೆಸ್ ಗೆ ಸಹಿಸಲು ಆಗದ ಸ್ಥಿತಿ ಇದೆ. ಆದ್ದರಿಂದ ಇಲ್ಲಸಲ್ಲದ ಆರೋಪ ಮಾಡುತಿದ್ದಾರೆ. ಆದರೆ ಅವರು ಆರೋಪ ಮಾಡೋದು ಮಾತ್ರ ಅಭಿವೃದ್ಧಿ ಮಾಡಿ ಅವರಿಗೆ ಗೊತ್ತೇ ಇಲ್ಲ ಎಂದು ಹೇಳಿದರು.

ಬಿಜೆಪಿ ಧ್ವನಿ ಎತ್ತಿದೆ : ಸೌಜನ್ಯ ಹೆಣ್ಣು ಮಗಳಿಗಾದ ಅನ್ಯಾಯದ ವಿರುದ್ಧ ಬಿಜೆಪಿ ಧ್ವನಿ ಎತ್ತಿದೆ. ಹೋರಾಟವನ್ನೂ ಮಾಡಿದೆ. ಆದರೆ ಈಗ ಪ್ರಕರಣ ನ್ಯಾಯಾಲಯದಲ್ಲಿ ಇದೆ. ಈಗ ನೋಟಾ ಹೆಸರಿನ ಅಭಿಯಾನ ಅದೊಂದು ಷಡ್ಯಂತ್ರ. ಇದರಿಂದ ಯಾವುದೇ ಕಾರ್ಯ ಸಾಧನೆ ಆಗಲು ಸಾಧ್ಯವಿಲ್ಲ ಎಂದ ಅವರು, ಈ ಬಾರಿ ನಮ್ಮ ಅಭ್ಯರ್ಥಿ ಸುಮಾರು 60 ಸಾವಿರಕ್ಕೂ ಅಧಿಕ ಲೀಡ್ ಪಡೆದು ಗೆಲುವು ಸಾಧಿಸಲಿದ್ದಾರೆ ಎಂದು ಅಂಗಾರರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ, ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಎಸ್ಸಿ‌ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಗನ್ನಾಥ ಜಯನಗರ, ಪ್ರದೀಪ್ ಕೊಲ್ಲರಮೂಲೆ, ಲತೀಶ್ ಗುಂಡ್ಯ ನಿಖಿಲ್ ಐವರ್ನಾಡು ಉಪಸ್ಥಿತರಿದ್ದರು.