ದಿ. ಸರವು ಭಾಗವತ ಕೃಷ್ಣ ಭಟ್ಟರ ಜನ್ಮ ಶತಮಾನೋತ್ಸವ ಮತ್ತು ದಿ. ಸರವು ಗೌರಿ ಅಮ್ಮ ಸಂಸ್ಮರಣೆ

0

ದಿ. ಸರವು ಭಾಗವತ ಕೃಷ್ಣ ಭಟ್ಟರ ಜನ್ಮ ಶತಮಾನೋತ್ಸವ ಮತ್ತು ದಿ. ಸರವು ಗೌರಿ ಅಮ್ಮ ಸಂಸ್ಮರಣಾ ಕಾರ್ಯಕ್ರಮ ಎ. 20ರಂದು ಮುರುಳ್ಯ ಮಾನಸವನದಲ್ಲಿ ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷ ಸರವು ಕೃಷ್ಣ ಭಟ್ಟರ ಅಧ್ಯಕ್ಷತೆಯಲ್ಲಿ ನಡೆಯಿತು.
ಯಕ್ಷಗಾನ ಕಲಾವಿದ ಸತ್ಯಶಂಕರ ಭಟ್ ಮಲೆಯಾಳ ಸಂಸ್ಮರಣಾ ಮಾತುಗಳನ್ನಾಡಿದರು.


ಹಿರಿಯ ಭಾಗವತರಾದ ದಿನೇಶ್ ಅಮ್ಮಣ್ಣಾಯ, ಹಿರಿಯ ಮದ್ದಳೆ ವಾದಕ ಪದ್ಯಾಣ ಪರಮೇಶ್ವರ ಭಟ್ ಮತ್ತು ಚೆಂಡೆ, ಮದ್ದಳೆ ವಾದಕ ಕುಮಾರ ಸುಬ್ರಹ್ಮಣ್ಯ ವಳಕುಂಜರಿಗೆ ಈ ಸಂದರ್ಭದಲ್ಲಿ ಸನ್ಮಾನ ನಡೆಯಿತು. ಸರವು ಗೋವಿಂದ ಭಟ್, ಸತ್ಯಶಂಕರ ಮಾಪಲಮಜಲು ಮತ್ತು ಮುರಲೀಕೃಷ್ಣ ಮಾನಸವನ ಸನ್ಮಾನ ಪತ್ರ ವಾಚಿಸಿದರು. ಮಾಪಲಮಜಲು ಗಣೇಶ್ ಭಟ್ ಮತ್ತು ಎಸ್.ಕೆ‌. ರಾಮಶರ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೇಶವ ಭಟ್ ಮಾನಸವನ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಸಿರಿ ಹಿಳ್ಳೆಮನೆ ಮತ್ತು ಶೌರಿ ಹಿಳ್ಳೆಮನೆ ಪ್ರಾರ್ಥಿಸಿದರು. ಸರವು ನಾರಾಯಣ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ಭಕ್ತ ಮಯೂರಧ್ವಜ ನಡೆಯಲಿದೆ