ಈ ಬಾರಿ ಬಿಜೆಪಿಗೆ ದೊಡ್ಡ ಅಂತರದ ಗೆಲುವುಮೋದಿ ಜನಪ್ರಿಯತೆಗೆ ಕಾಂಗ್ರೆಸ್ ಕಂಗಾಲುಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಪತ್ರಿಕಾಗೋಷ್ಠಿ

0

ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ದೇಶದಲ್ಲೇ ಬಿಜೆಪಿಗೆ ದೊಡ್ಡ ಅಂತರದ ಗೆಲುವು ಸಿಗುವುದು ಶತ ಸಿದ್ಧವಾಗಿದ್ದು, ಮೋದಿ ಜನಪ್ರಿಯತೆಯನ್ನು ಕಂಡಿರುವ ಕಾಂಗ್ರೆಸ್ ಕಂಗಾಲಾಗಿ ಹತಾಶೆಯಿಂದ ಬಿಜೆಪಿ ವಿರುದ್ಧ ಆರೋಪಗಳನ್ನು ಮಾಡುತ್ತಿದೆ. ಅವರು ಏನೇ ಕುತಂತ್ರ ಮಾಡಿದರೂ ಜನರು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಈ ಬಾರಿ ಮತ್ತೊಮ್ಮೆ ಮೋದಿಯವರು ಪ್ರಧಾನಿ ಆಗುವುದು ಗ್ಯಾರಂಟಿ ಎಂದು ಬಿಜೆಪಿ ನಿರ್ವಹಣಾ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿದ್ದಾರೆ.
ಎ.೨೦ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠೀಯಲ್ಲಿ ಮಾತನಾಡಿದ ಅವರು, ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಈ ಹಿಂದೆಯ ಚುನಾವಣೆಯಲ್ಲಿ ೪೫ ಸಾವಿರ ಲೀಡ್ ಪಕ್ಷಕ್ಕೆ ನೀಡಲಾಗಿತ್ತು. ಈ ಬಾರಿ ೬೦ ಸಾವಿರ ಲೀಡ್ ನೀಡುವ ನಿಟ್ಟಿನಲ್ಲಿ ಕೆಲಸ ಕಾರ್ಯ ನಡೆದಿದ್ದು, ೧೦ ಮಹಾಶಕ್ತಿ ಕೇಂದ್ರ, ೬೮ ಶಕ್ತಿ ಕೇಂದ್ರ, ೨೩೩ ಬೂತ್ ಸಭೆಗಳು ಆಗಿದೆ. ಹೀಗೆ ಶೇ.೮೦ರಷ್ಟು ಪ್ರಥಮ ಸುತ್ತಿನ ಕೆಲಸ ನಡೆದಿದ್ದು ಎ.೨೧ರಂದು ಬಿಜೆಪಿಯಿಂದ ಮಹಾ ಸಂಪರ್ಕ ಅಭಿಯಾನ ನಡೆಸಲಿzವೆ. ಕ್ಷೇತ್ರ ಸುತ್ತಾಟದ ವೇಳೆ ಉತ್ತಮ ಪ್ರತಿಕ್ರಿಯೆ ಬಂದಿದ್ದು, ನಮ್ಮ ಅಭ್ಯರ್ಥಿ ಬ್ರಿಜೇಶ್ ಚೌಟ ದಾಖಲೆ ಅಂತರದಲ್ಲಿ ಗೆಲ್ಲಲಿದ್ದಾರೆ'' ಎಂದು ಹೇಳಿದರು. ಕಾಂಗ್ರೆಸ್‌ನವರು ಹತಾಶೆ ಭಾವನೆಯಿಂದ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್‌ಗೆ ಅವರ ಪಕ್ಷದ ಮೇಲೆ ವಿಶ್ವಾದ ಇಲ್ಲದ ಸ್ಥಿತಿ ಹುಬ್ಬಳ್ಳಿ ಘಟನೆ ನೋಡಿದಾಗ ತಿಳಿಯುತ್ತದೆ. ಹತ್ಯೆಗೀಡಾದ ಹೆಣ್ಣು ಮಗಳ ತಂದೆ ಈ ಹತ್ಯೆಯ ತನಿಖೆ ಕಾಂಗ್ರೆಸ್ ಮಾಡಿದರೆ ನ್ಯಾಯ ಸಿಗಲು ಸಾಧ್ಯ ಇಲ್ಲ ಎಂದು ಅಲ್ಲಿಯ ನಮ್ಮ ಸಂಸದರಲ್ಲಿಯೇ ಹೇಳಿರುವುದು ನಾವು ನೋಡಬಹುದು. ದೇಶದಲ್ಲಿ ಹಿಂದುಗಳು ಧೈರ್ಯವಾಗಿ ಓಡಾಡಬೇಕಾದರೆ ಹಿಂದೂ ಸರಕಾರವೇ ಬರಬೇಕಾಗಿದೆ. ಆದ್ದರಿಂದ ಕಾಂಗ್ರೆಸ್‌ನ ಹಿಂದೂಗಳು ಕೂಡಾ ನಮ್ಮೊಡನೆ ಕೈ ಜೋಡಿಸಬೇಕೆಂದು ನಾವು ಕೇಳಿಕೊಳ್ಳುವುದಾಗಿ” ಅವರು ಹೇಳಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ಮಾತನಾಡಿ, “ಕಾಂಗ್ರೆಸ್ ಗೆಲ್ಲಬೇಕೆಂದು ಜಾತಿ ಮತ್ತು ನೋಟಾ ಅಭಿಯಾನವನ್ನು ಸೃಷ್ಠಿಸಿದ್ದು, ಮತದಾರರು ಗೊಂದಲಕ್ಕೆ ಒಳಗಾಗದೇ ಬಿಜೆಪಿಗೆ ಮತ ಹಾಕುತ್ತಾರೆ ಎಂದು ಅವರು ಹೇಳಿದರು. ಸೌಜನ್ಯ ಹತ್ಯೆಗೆ ನ್ಯಾಯ ಸಿಗಬೇಕೆಂದು ನಮ್ಮದೂ ಹೋರಾಟ ಇದೆ. ಆದರೆ ನೋಟಾದಿಂದ ನ್ಯಾಯ ಸಿಗಲು ಸಾಧ್ಯನಾ?. ಮಹೇಶ್ ಶೆಟ್ಟಿ ತಿಮರೋಡಿಯವರ ಹೇಳಿಕೆಗಳು ನೊಡುವಾಗ ಅವರಿಗೆ ಬಿಜೆಪಿಯೇ ಟಾರ್ಗೆಟ್ ಎಂದು ನಮಗನಿಸುತ್ತಿದೆ ಎಂದರಲ್ಲದೆ, ಬೆಳ್ತಂಗಡಿಯ ಶಾಸಕರಾಗಿದ್ದ ವಸಂತ ಬಂಗೇರರು ಈ ಹಿಂದೆ ಆರೋಪಿಗಳು ನಮಗೆ ಗೊತ್ತಿದೆ. ಹೇಳಿದರೆ ಜೀವ ಭಯ ಕಾಡುತ್ತಿದೆ ಎಂದು ಹೇಳಿದ್ದರು. ತಿಮರೋಡಿಯವರು ಯಾಕೆ ಈ ಬಗ್ಗೆ ಮಾತನಾಡುತಿಲ್ಲ. ಆದ್ದರಿಂದ ಪ್ರಜ್ಞಾವಂತ ಮತದಾರರು ನೋಟಾಕ್ಕೆ ಮತ ನೀಡುವುದಿಲ್ಲ ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆಯನ್ನು ನಾವು ಟೀಕೆ ಮಾಡುವುದಿಲ್ಲ. ಆದರೆ ಅದರ ಸಮರ್ಪಕ ಅನನುಷ್ಠಾನ ಆಗಬೇಕು. ಮೋದಿ ಗ್ಯಾರಂಟಿ ಎಂದರೆ ಅದು ಕಾಂಗ್ರೆನವರ ಗ್ಯಾರಂಟಿಯ ಕಾಪಿ ಅಲ್ಲ ಬದಲಾಗಿ ಎಲ್ಲ ದೇಶದ ವರ್ಗದ ಜನರಿಗೆ ಸ್ವಾವಲಂಬಿಯಾಗಿ ಬದುಕು ಕೊಟ್ಟಿರುವ ನಾಯಕ ಮೋದಿಯವರು. ಇದನ್ನು ವಿಶ್ವವೇ ಹೇಳುತ್ತಿದೆ ಎಂದು ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯ ಕಂದಡ್ಕ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್.ಮನ್ಮಥ, ಬಿಜೆಪಿ ಕೋಶಾಧಿಕಾರಿ ಸುಭೋದ್ ಶೆಟ್ಟಿ ಮೇನಾಲ, ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಪುತ್ತುರು ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ದಿನೇಶ್ ಮೆದು ಇದ್ದರು.