ಶ್ರೀ ಬಸವೇಶ್ವರ ದೇವಸ್ಥಾನ ಕುಲ್ಕುಂದ ಇದರ ವರ್ಷಾವಧಿ ಜಾತ್ರೋತ್ಸವ ಏ.19 ಮತ್ತು ಏ.20 ರಂದು ನಡೆಯಿತು.
ಏ.19 ರಂದು ಬೆಳಗ್ಗೆ ಹಸಿರು ಕಾಣಿಕೆ ಸಮರ್ಪಣೆ ನಡೆಯಿತು. ಸಂಜೆ ತಂತ್ರಿಗಳ ಆಗಮನದ ಬಳಿಕ ಪ್ರಸಾದ ಶುದ್ಧಿ, ವಾಸ್ತುಹೋಮ, ವಾಸ್ತುಬಲಿ, ಪುಣ್ಯಾಹವಾಚನ ನಡೆದು ಮಹಾಪೂಜೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಏ 20 ರಂದು
ಬೆಳಿಗ್ಗೆ ಮಹಾಗಣಪತಿ ಹೋಮ , ಮಹಾಪೂಜೆ ನಡೆದು ಶತರುದ್ರಾಭಿಷೇಕ ನಡೆಯಿತು.
ಬಳಿಕ ಪರಿವಾರ ದೇವರುಗಳಿಗೆ ಕಲಶಾಭಿಷೇಕ, ತಂಬಿಲಸೇವೆ ನಡೆಯಿತು.
ಮಧ್ಯಾಹ್ನ ಶ್ರೀ ಬಸವೇಶ್ವರ ದೇವರಿಗೆ ಕಲಶಾಭಿಷೇಕ ನಡೆದು
ಮಧ್ಯಾಹ್ನ ಪರಿವಾರ ದೈವಗಳ ಸಾನಿಧ್ಯದ ಕುರಿತು ಸಾಮೂಹಿಕ ಪ್ರಾರ್ಥನೆ ನಡೆಯಿತು. ಬಳಿಕ ಮಹಾಪೂಜೆ ನಡೆದು ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ರಾತ್ರಿ ದೀಪಾರಾಧನೆ, ತಾಯಂಬಕ ರಂಗಪೂಜೆ ಬಳಿಕ ರಾತ್ರಿ ಶ್ರೀ ಭೂತಬಲಿ, ಪಲ್ಲಕ್ಕಿ ಉತ್ಸವ, ವಸಂತಕಟ್ಟೆ ಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ ಮಂತ್ರಾಕ್ಷತೆ ನಡೆದು ಅನ್ನಸಂತರ್ಪಣೆ ನಡೆಯಿತು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಅಭಿವೃದ್ಧಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಬೈಲುವಾರು ಸಮಿತಿ ಸದಸ್ಯರು ಕಾರ್ಯಕ್ರಮ ಯಶಸ್ವಿ ಗೆ ಸಹಕರಿಸಿದರು.