ಸುಳ್ಯ ಗುರು ರಾಘವೇಂದ್ರ ಮಠದ ಪ್ರತಿಷ್ಠಾ ಮಹೋತ್ಸವ

0

ಪಲ್ಲಕ್ಕಿಯಲ್ಲಿ ರಾಯರ ವಿಜೃಂಭಣೆಯ ಪಟ್ಟಣ ಸವಾರಿ- ನರ್ತನ ಸೇವೆ,ಆಕರ್ಷಕ ಕುಣಿತ ಭಜನೆ

ಸುಳ್ಯದ ಶ್ರೀ ಗುರು ರಾಘವೇಂದ್ರ ಮಠದ 6 ನೇ ವರ್ಷದ ಪ್ರತಿಷ್ಠಾ ವಾರ್ಷಿಕ ಮಹೋತ್ಸವದ ಅಂಗವಾಗಿ ಮಠದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀ ಹರಿ ಎಳಚಿತ್ತಾಯ ರವರ ಮಾರ್ಗದರ್ಶನದಲ್ಲಿ
ಎ. 21 ರಂದು ಬೆಳಗ್ಗೆ ಅರ್ಚಕ ರವಿ ನಾವಡ ರವರ ನೇತೃತ್ವದಲ್ಲಿ ಗಣಪತಿ ಹವನ ನೆರವೇರಿತು.


ಸಂಜೆ ವಿಶೇಷವಾಗಿ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಸಂಧ್ಯಾ ಕಾಲದಲ್ಲಿ ಸುಳ್ಯದ ಪ್ರಮುಖ ಬೀದಿಯಲ್ಲಿ ವಿಶೇಷ ಚೆಂಡೆ ವಾದ್ಯ ಘೋಷದೊಂದಿಗೆ ಕುಣಿತ ಭಜನಾ ತಂಡಗಳ ಆಕರ್ಷಕ ಕುಣಿತ ಭಜನೆಯೊಂದಿಗೆ ಭಕ್ತ ಸಮೂಹದ ಕಾಲ್ನಡಿಗೆಯ‌ ಯಾತ್ರೆಯ ಮೂಲಕ ಶ್ರೀ ಗುರು ರಾಯರ ಪಲ್ಲಕ್ಕಿಯ ಪಟ್ಟಣ ಸವಾರಿಯು ಸಾಗಿ‌ ಬಂತು. ಮಠದಿಂದ ಪ್ರಾರಂಭಗೊಂಡ ಮೆರವಣಿಗೆಯು ವಿವೇಕಾನಂದ ಸರ್ಕಲ್ ಮೂಲಕ ಜೂನಿಯರ್ ಕಾಲೇಜ್ ರಸ್ತೆಯಾಗಿ
ಶ್ರೀ ಹರಿ ಕಾಂಪ್ಲೆಕ್ಸ್ ಎದುರಿನಲ್ಲಿ ಹಾಗೂ ಖಾಸಗಿ ಬಸ್ ನಿಲ್ದಾಣದ ಬಳಿ ನರ್ತನ ಸೇವೆಯಾಗಿ ರಥಬೀದಿಯಲ್ಲಿ ಸಾಗಿ ಬಂದು ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಸಮಾಪನಗೊಂಡಿತು. ಅಲ್ಲಿಂದ ಮುಂದುವರಿದ ಮೆರವಣಿಗೆಯು ಮಠಕ್ಕೆ ಹಿಂತಿರುಗಿ ಬಂದು ಅರ್ಚಕರ ನೇತೃತ್ವದಲ್ಲಿ ಮಹಾ ಪೂಜೆಯಾಗಿ ಪ್ರಸಾದ ವಿತರಣೆಯಾಗಿ ಅನ್ನ ಸಂತರ್ಪಣೆ ನೆರವೇರಿತು. ಮಠದ
ಬೃಂದಾವನ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶ್ರೀಕೃಷ್ಣ ಸೋಮಯಾಗಿ, ಸಂಚಾಲಕ ಪ್ರಕಾಶ್ ಮೂಡಿತ್ತಾಯ ಹಾಗೂ ಟ್ರಸ್ಟಿನ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.


ಮೆರವಣಿಗೆಯುದ್ದಕ್ಕೂ ಭಕ್ತಾದಿಗಳು ಆಗಮಿಸಿದ ರು.