ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆಯನ್ನು ನಾವು ಖಂಡಿಸುತಿದ್ದು, ಇಂತಹ ಕೃತ್ಯ ಎಸಗುವ ಯಾರೇ ಆಗಲಿ ಅಂತವರನ್ನು ಎನ್‌ಕೌಂಟರ್ ಮಾಡುವಂತಹ ಕಾನೂನು ಜಾರಿಯಾಗಬೇಕೆಂದು ನಾವು ಆಗ್ರಹಿಸುತ್ತೇವೆ ಎಂದು ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಹೀದ್ ಹೇಳಿದ್ದಾರೆ.
ಎ.೨೨ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಹತ್ಯೆಯಂತ ಘಟನೆಗಳನ್ನು ಯಾರೂ ಸಮರ್ಥಿಸುವುದಿಲ್ಲ. ಮತ್ತು ಅಂತ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತಾಗಬೇಕು. ಈ ರೀತಿಯ ಹತ್ಯೆಗಳು ನಡೆದಾಗ ಜಾತಿ- ಧರ್ಮಗಳ ಬಣ್ಣ ಬೆರೆಸಬಾರದು. ಅದು ಸರಿಯಲ್ಲ. ಹುಬ್ಬಳ್ಳಿ ಘಟನೆಯ ಬಳಿಕ ಅಲ್ಲಿಯ ಅಂಜುಮಾನ್ ಸಂಸ್ಥೆಯವರು ಕೈಗೊಂಡ ನಿರ್ಧಾರ ಶ್ಲಾಘನೀಯ. ಆರೋಪಿಯ ಪರ ಯಾವ ವಕೀಲರು ಕೂಡಾ ವಕಾಲತ್ತು ಹಾಕಬಾರದೆಂದು ಅವರು ಕೇಳಿಕೊಂಡಿದ್ದಾರೆ. ಮತ್ತು ನೇಹಾ ನೆನಪಿಗಾಗಿ ಶಿಕ್ಷಣ ಸಂಸ್ಥೆಯ ಒಂದು ಕೊಠಡಿಗೆ ನೇಹಾ ಹೆಸರಿಡಲು ಸಂಸ್ಥೆ ನಿರ್ಧರಿಸಿದೆ. ಮತ್ತು ಅಲ್ಲಿಯ ಮುಸ್ಲಿಂ ಸಮಾಜ ಬಾಂಧವರು ಘಟನೆಯನ್ನು ಖಂಡಿಸಿ ಅಂಗಡಿ ಮುಂಗಟ್ಟನ್ನು ಸ್ವಯಂ ಪ್ರೇರಿತವಾಗಿ ಮುಚ್ಚಿದ್ದಾರೆ. ಹತ್ಯೆಗೀಡಾ ಯುವತಿಯ ಮನೆಯವರ ನೋವಿಗೆ ಸ್ಪಂದನೆ ನೀಡಿದ್ದಾರೆ. ಇದು ಭಾರತೀಯ ಧರ್ಮ ಎಂದು ಅವರು ಉಲ್ಲೇಖಿಸಿದರು.
ಒಂದು ಹತ್ಯೆಗಳು ನಡೆದಾಗ ಎಲ್ಲರೂ ಸೇರಿ ಅದನ್ನು ಖಂಡಿಸಬೇಕು. ಹೊರತು ಒಂದು ಧರ್ಮವನ್ನೇ ದೂರುವುದು ಸರಿಯಲ್ಲ. ಸುಳ್ಯದಲ್ಲಿಯೂ ಕೆಲವು ವರ್ಷಗಳ ಹಿಂದೆ ರಥಬೀದಿಯಲ್ಲಿ ಯುವತಿಯ ಹತ್ಯೆ ನಡೆದಿತ್ತು. ಮೊನ್ನೆ ಉಡುಪಿಯಲ್ಲಿ ಘಟನೆ ನಡೆದಿದೆ. ಮಣಿಪುರದ ಘಟನೆ ನಡೆದಿದೆ. ಇಲ್ಲೆಲ್ಲ ನಡೆದ ಘಟನೆಗೆ ಕಾರಣ ಯಾರೆಂದು ನಾವು ನೋಡಿzವೆ. ಹಾಗೆಂದ ಮಾತ್ರಕ್ಕೆ ಧರ್ಮದ ಕಡೆ ಕೈ ಮಾಡುವುದು ಸರಿಯಲ್ಲ. ಹತ್ಯೆ ಮಾಡಿದವರು ಯಾರೇ ಇರಲಿ. ಕಠಿಣ ಶಿಕ್ಷೆ ಆಗಬೇಕು. ಆ ರೀತಿಯ ಕಾನೂನು ಜಾರಿಯಾಗಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಹೇಳಿದ ಅವರು, ನೇಹಾ ಹತ್ಯೆಯ ವಿಚಾರವನ್ನು ಬಿಜೆಪಿಯವರು ರಾಜಕೀಯವಾಗಿ ತರುವುದು ಸರಿಯಲ್ಲ. ಅವರಿಗೆ ಚುನಾವಣೆಗೆ ಹೋಗಲು ಯಾವುದೇ ವಿಷಯ ಇಲ್ಲ. ಆದ್ದರಿಂದ ಈ ವಿಷಯವನ್ನು ರಾಜಕೀಯವಾಗಿ ಬಳಸುತ್ತಾರೆ ಎಂದು ಹೇಳಿದರು.
ಹಿರಿಯ ಕಾಂಗ್ರೆಸ್ ನಾಯಕ ಪಿ.ಎ. ಮಹಮ್ಮದ್, ನ.ಪಂ. ಸದಸ್ಯ ಕೆ.ಎಸ್. ಉಮ್ಮರ್, ಅಲ್ಪಸಂಖ್ಯಾತರ ವಿವಿಧೋzಶ ಸಹಕಾರ ಸಂಘದ ಅಧ್ಯಕ್ಷ ಇಕ್ಬಾಲ್ ಎಲಿಮಲೆ ಮಾತನಾಡಿ, “ಹುಬ್ಬಳ್ಳಿಯಂತಹ ಘಟನೆಯನ್ನು ಯಾರೂ ಸಮರ್ಥಿಸುವಂತದ್ದಲ್ಲ. ಆರೋಪಿಗೆ ಎನ್ ಕೌಂಟರ್ ಮಾಡುವಂತಹ ಶಿಕ್ಷೆಯೇ ಆಗುವಂತ ಕಾನೂನು ಬರಬೇಕು. ಮುಂದೆ ಸಮಾಜದಲ್ಲಿ ಈ ರೀತಿಯ ಘಟನೆ ಆಗಬಾರದು ಎಂದು ಹೇಳಿದರು.
ಪತ್ರಿಕಾಗೋಷ್ಠೀಯಲ್ಲಿ ನ.ಪಂ. ನಾಮನಿರ್ದೇಶಿತ ಸದಸ್ಯ ಸಿದ್ದೀಕ್ ಕೊಕ್ಕೊ, ವಕೀಲರಾದ ಫವಾಜ್ ಕನಕಮಜಲು ಇದ್ದರು.