ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿಕೊಂಡ ಕೆ ಆರ್ ಎಸ್ ಪಕ್ಷದ ಮುಖಂಡ ಪ್ರವೀಣ್ ವಿಟ್ಲ
ಚುನಾವಣೆಯಲ್ಲಿ ನೋಟಾ ಮತದಾನದ ಮಾಡಿ ಮತದಾನದ ಪ್ರಾಮುಖ್ಯತೆಯನ್ನು ಕಳೆದುಕೊಳ್ಳಬೇಡಿ. ನೋಟಾ ಮತದಾನ ಮಾಡುವುದರಿಂದ ಸಮಸ್ಯೆ ಹೆಚ್ಚಾಗುತ್ತದೆ ವಿನಃ ಅದರಿಂದ ಪರಿಹಾರವೇನು ಇಲ್ಲ ಎಂದು ಕೆ ಆರ್ ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರವೀಣ್ ವಿಟ್ಲ ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದಾರೆ.
ಸೌಜನ್ಯ ಹತ್ಯೆಯನ್ನು ಖಂಡಿಸಿ ನಮ್ಮ ಪಕ್ಷವೂ ಕೂಡ ಸೌಜನ್ಯಳಿಗೆ ನ್ಯಾಯವನ್ನು ಕೇಳಿ ಹೋರಾಟವನ್ನು ಮಾಡಿದ ಪಕ್ಷವಾಗಿದೆ. ನ್ಯಾಯಕ್ಕಾಗಿ ಹೋರಾಟ ಮಾಡುವಾಗ ಕಾನೂನು ರೀತಿಯಲ್ಲಿ ಮಾಡಬೇಕೇ ಹೊರತು ಮತದಾನದ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುವ ನೋಟಾ ಅಭಿಯಾನ ಮೂಲಕ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಆದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಜ್ಞಾವಂತ ಮತದಾರರು ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ಸರಿಯಾದ ಮತದಾನ ಮಾಡುವ ಮೂಲಕ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಉತ್ತಮ ಹೋರಾಟಗಾರರಾಗಿದ್ದು, ಭ್ರಷ್ಟಾಚಾರದ ವಿರುದ್ಧ ಆಂದೋಲನವನ್ನು ಹಮ್ಮಿಕೊಂಡವರಾಗಿದ್ದಾರೆ.
ಆದ್ದರಿಂದಲೇ ಸುಳ್ಯದ ಮಣ್ಣಿನಿಂದ ಒಬ್ಬ ವಿದ್ಯಾವಂತೆ ಅಭ್ಯರ್ಥಿ ರಂಜಿನಿ ಎಂ. ಅವರನ್ನು ಚುನಾವಣಾ ಕಣದಲ್ಲಿ ನಿಲ್ಲಿಸಿದ್ದು ಅವರಿಗೆ ತಮ್ಮೆಲ್ಲರ ಅಮೂಲ್ಯ ಮತಗಳನ್ನು ನೀಡುವಂತೆ ಅವರು ವಿನಂತಿಸಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ವೇಣುಗೋಪಾಲ್,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿತಾ ರೋಜಾರಿಯೋ, ಜಿಲ್ಲಾ ಉಪಾಧ್ಯಕ್ಷ ಐವನ್ ಪೆರಾವೊ, ಜಿಲ್ಲಾ ಕಾರ್ಯದರ್ಶಿ ಸಿಮಿ ಉಪಸ್ಥಿತರಿದ್ದರು.