ಕೆಲಸ ಸರಿಯಾಗಿ ಮಾಡಬೇಕೆಂಬ ಕಾರಣಕ್ಕೆ ಪೈಪ್ ಲೈನ್ ಕಾಮಗಾರಿ ನಿಲ್ಲಿಸಲಾಗಿದೆ : ರಿಯಾಜ್ ಕಟ್ಟೆಕಾರ್

0

ಒಳಚರಂಡಿ ‌ಕಾಮಗಾರಿಯಂತೆ ನೀರಿನ ಕಾಮಗಾರಿ ವ್ಯರ್ಥವಾಗಬಾರದು

ಸುಳ್ಯದಲ್ಲಿ ಈ ಹಿಂದೆ ಆದ ಒಳಚರಂಡಿ ಕಾಮಗಾರಿಯಂತೆ ಕುಡಿಯುವ ನೀರಿನ ಯೋಜನೆ ಆಗಬಾರದು.‌ಕೆಲಸ ಸಮರ್ಪಕವಾಗಿ ಆಗಬೇಕೆಂಬ ಕಾರಣಕ್ಕೆ ಆಕ್ಷೇಪ ಮಾಡಿ ಕೆಲಸ ನಿಲ್ಲಿಸಲಾಗಿದೆ ಹೊರತು ನಾವು ಅಭಿವೃದ್ಧಿ ಗೆ ವಿರೋಧ ಅಲ್ಲವೇ ಅಲ್ಲ ಎಂದು ನ.ಪಂ. ಸದಸ್ಯ ರಿಯಾಜ್ ಕಟ್ಟೆಕಾರ್ ಹೇಳಿದ್ದಾರೆ.

ನಗರ ವ್ಯಾಪ್ತಿಯಲ್ಲಿ ‌ಯಾವುದೇ ಕೆಲಸ ಆಗುವಾಗ ಅದರ ಸಂಪುರ್ಣ ಚಿತ್ರ ಪಂಚಾಯತ್ ಸದಸ್ಯರು ಮತ್ತು ಸಾರ್ವಜನಿಕರಿಗೆ ನೀಡಬೇಕು. ಸರಕಾರದಿಂದ ಹಣ ಬಂದಿದೆ ಎಂದು ಏಕಾಏಕಿ ರಸ್ತೆ ಅಗೆಯುವುದಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಹಳೆ ನೀರಿನ ಪೈಪ್ ಒಡೆದು ನೀರಿಗೂ ಸಮಸ್ಯೆಯಾಗುತ್ತಿದೆ. ಮತ್ತು ಸುಳ್ಯ ಧೂಳಿನಿಂದ ಮುಳುಗುವ ಸ್ಥಿತಿ‌ನಿರ್ಮಾಣವಾಗಿದೆ. ಆದ್ದರಿಂದ ವ್ಯವಸ್ಥಿತವಾಗಿ ಕೆಲಸ ಆಗಬೇಕು.‌ ಆ ಕಾಮಗಾರಿ ದೀರ್ಘ ಕಾಲ‌ಬಾಳಿಕೆ‌ ಬಂದು ಜನರಿಗೆ ಉಪಯೋಗ ವಾಗಬೇಕೆಂಬುದು ನಮ್ಮ ಕಳಕಳಿ. ಹೊರತು‌ ಈ ಹಿಂದೆ ಸುಳ್ಯದಲ್ಲಿ ಆಗಿರುವ ಒಳಚರಂಡಿ ಕಾಮಗಾರಿಯಂತೆ ವ್ಯರ್ಥವಾಗಬಾರದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.