ವಿದ್ಯುತ್ ಕಂಬಗಳು ತುಂಡಾಗಿ ವಿದ್ಯುತ್ ವ್ಯತ್ಯಯ
ಎ.22 ರಂದು ಸಂಜೆ ಅಜ್ಜಾವರ ಗ್ರಾಮದ ಮೇನಾಲ, ತುದಿಯಡ್ಕ ಭಾಗದಲ್ಲಿ ಸಂಜೆ 5ರ ಸುಮಾರಿಗೆ ಬಿರುಗಾಳಿಯಂತೆ ಬೀಸಿದ ಭಾರೀ ಗಾಳಿ ಹಾಗೂ ಮಳೆಗೆ ಅಡಿಕೆ ಕೃಷಿ ಹಾನಿಯಾಗಿದೆ.
ವಿದ್ಯುತ್ ಕಂಬಗಳು ತುಂಡರಿಸಲ್ಪಟ್ಟಿದ್ದು ವಿದ್ಯುತ್ ವ್ಯತ್ಯಯ ಉಂಟಾಗಿದೆ ಎಂದು ತಿಳಿದುಬಂದಿದೆ.
ನಿನ್ನೆ ಸಂಜೆಯ ಗಾಳಿಗೆ ಅಜ್ಜಾವರ ಗ್ರಾಮದ ಮೇನಾಲ ತುದಿಯಡ್ಕ ಭಾಗದಲ್ಲಿ ಬಹಳಷ್ಟು ಹಾನಿ ಸಂಭವಿಸಿದೆ. ಬಹುತೇಕ ಜನರ ಅಡಿಕೆ ತೋಟದಲ್ಲಿ 50-100-200 ರಂತೆ ಅಡಿಕೆ ಮರಗಳು ಮುರಿದು ಬಿದ್ದಿದ್ದು, ಒಟ್ಟು ನಾಲ್ಕೈದು ಸಾವಿರ ಅಡಿಕೆ ಮರಗಳು ಬಿದ್ದಿರಬಹುದು . ವಿದ್ಯುತ್ ಕಂಬಗಳು ಕೂಡ ಅಲ್ಲಲ್ಲಿ ಮುರಿದು ಬಿದ್ದಿವೆ. ಅಲ್ಲಲ್ಲಿ ಮರಗಳು ಮುರಿದು ಬಿದ್ದು ರಸ್ತೆ ಸಂಚಾರ ಬಂದ್ ಆಗಿದೆ ಎಂದು ಸುಭೋದ್ ಶೆಟ್ಟಿ ಮೇನಾಲ ತಿಳಿಸಿದ್ದಾರೆ.
ಸಂಜೆ ಬಿರುಗಾಳಿಯಂತೆ ಭಾರೀ ಬೀಸತೊಡಗಿತು. ಮಳೆಯೂ ಇತ್ತು. ಅಡಿಕೆ ತೋಟಗಳಲ್ಲಿ ಮರಗಳು ಮಗುಚಿ ಬಿದ್ದಿದ್ದು ಕೃಷಿ ಹಾನಿಗೊಂಡಿದೆ ಎಂದು ಪ್ರಸಾದ್ ರೈ ಮೇನಾಲರು ತಿಳಿಸಿದ್ದಾರೆ.