ಚುನಾವಣಾ ಸಿಬ್ಬಂದಿ ಬೇಜವಾಬ್ದಾರಿ

0

ಚುನಾವಣಾ ಸಿಬ್ಬಂದಿಯ ಬೇಜವಾಬ್ದಾರಿಯ ಪರಿಣಾಮವಾಗಿ ಮುಪ್ಪೇರ್ಯ ಗ್ರಾಮದ 137 ನೇ ಬೂತಿನ ಸುಮಾರು 28 ಜನರ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಆಗಿರುವ ಘಟನೆ ವರದಿಯಾಗಿದ್ದು, ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಆಗಿರುವುದರಿಂದ ಈ ಬಾರಿಯ ಮತದಾನಕ್ಕೆ ಇವರಿಗೆ ಅವಕಾಶ ಇಲ್ಲದಂತಾಗಿದೆ.28 ಜನರ ಹೆಸರು ಡಿಲಿಟ್ ಆಗಿದ್ದು ಸುಮಾರು 23 ಜನರ ಹೆಸರು ಡಿಲಿಟ್ ಆಗಿರುವುದು ಕನ್ಫರ್ಮ್ ಆಗಿರುವುದಾಗಿ ಆ ವಾರ್ಡಿನ ಗ್ರಾ.ಪಂ.ಸದಸ್ಯ ಹರ್ಷ ಜೋಗಿಬೆಟ್ಟು ತಿಳಿಸಿದ್ದಾರೆ.

ಈ ಬಗ್ಗೆ ಚುನಾವಣಾ ಬೂತ್ ಲೆವೆಲ್ ಆಫೀಸರ್ ಕೃಷ್ಣಪ್ರಸಾದ್ ರವರಲ್ಲಿ ವಿಚಾರಿಸಿದಾಗ ” ಶಿಫ್ಟಿಂಗ್ ಆಗುವಾಗ ಈ ರೀತಿ ಆಗಿದೆ.ಮದುವೆ ಆಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವಾಗ ಮನೆಯಲ್ಲಿ ಅವರು ಇಲ್ಲದಿದ್ದರೆ ಶಿಫ್ಟಿಂಗ್ ಅಂತ ಕೊಡಬೇಕು. ನಾವು ಆ ರೀತಿ ಕೊಟ್ಟಿದ್ದೇವೆ. ಆದರೆ ಚುನಾವಣಾ ಕಚೇರಿಯಲ್ಲಿ ಅದನ್ನು ಡಿಲೀಟ್ ಮಾಡಿದ್ದಾರೆ.6 ಜನರದ್ದು ಹಾಗೆ ಆಗಿದೆ.15 ಜನರದ್ದು ನಿಧನರಾದದ್ದು ಇದೆ” ಎಂದು ತಿಳಿಸಿದ್ದಾರೆ.