ನಾಳೆ ಸುಳ್ಯದಲ್ಲಿ‌ ಬಿಂದು ಜುವೆಲ್ಲರಿ ಶುಭಾರಂಭ

0

42 ವರ್ಷಗಳ ಇತಿಹಾಸವಿರುವ ಜುವೆಲ್ಲರಿಯ ಮೂರನೇ ಶಾಖೆ ಸುಳ್ಯದಲ್ಲಿ ಪ್ರಾರಂಭಿಸುತ್ತಿದ್ದೆವೆ: ಶ್ರೀಮತಿ ಶೋಭನಾ ಕುಂಞಿಕಣ್ಣನ್

ಕಾಸರಗೋಡಿನಲ್ಲಿ ಕಳೆದ 42 ವರ್ಷಗಳ ಹಿಂದೆ ಸಂಸ್ಥಾಪಕರಾದ ದಿ| ಕೆ.ವಿ ಕುಂಞಿಕಣ್ಣನ್ ರವರು ಸ್ಥಾಪಿಸಿ ಕಾಸರಗೋಡಿನಲ್ಲಿ ವಿಶಾಲವಾದ ಬೃಹತ್ ಎರಡು ಮಳಿಗೆಯನ್ನು ಹೊಂದಿದ್ದು ಇದೀಗ ಕಾಸರಗೋಡಿನ ಗಡಿ ಪ್ರದೇಶವಾದ ಸುಳ್ಯದಲ್ಲಿ ತಮ್ಮ ಮೂರನೇ ಮಳಿಗೆಯನ್ನು ಪ್ರಾರಂಬಿಸುತ್ತಿದ್ದಾರೆ.
ಇದರ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಎ.26 ರಂದು ನಡೆಯಿತು.


ಕಾರ್ಯಕ್ರಮಕ್ಕೆ ಬಿಂದು ಜುವೆಲ್ಲರಿ ಪಾಲುದಾರರ ಮಾತೃಶ್ರೀ ಶ್ರೀಮತಿ ಶೋಭನಾ ಕುಂಞಿಕಣ್ಣನ್ ಚಾಲನೆ ನೀಡಿದರು
ಅಬಿಲಾಷ್,ಡಾ.ಅಜಿತೇಶ್,ಶ್ರೀಮತಿ ‌ಸವಿತಾ ಅಬಿಲಾಷ್,ಶ್ರೀಮತಿ ಡಾ.ಲಿಜಿಷಾ ಅಜಿತೇಶ್, ಶ್ರೀಮತಿ ಬಿಂದು, ಶ್ರೀಮತಿ ಡಾ.ಬಿನಾ,ಶ್ರೀಮತಿ ಡಾ.ಬಬಿತಾ,ಅಜಯ್ ಕುಮಾರ್, ಪ್ರೇಮ್ ರಾಜ್,ಡಾ.ಶಶಿಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಸುಳ್ಯ ನಗರದ ಪೋಲಿಸ್ ಠಾಣೆಯ ಮುಂಭಾಗದಲ್ಲಿರುವ ಸುಸಜ್ಜಿತವಾದ ಸೊಮಾಯಾಗಿ ಕಟ್ಟಡದಲ್ಲಿ ಅತ್ಯಾಧುನಿಕ ಆಕರ್ಷಣೆಗಳೊಂದೊಗೆ ಬಿಂದು ಜುವೆಲ್ಲರಿ ಸುಳ್ಯ ಮಳಿಗೆ ಎ.27 ರಂದು ಉದ್ಘಾಟನೆಗೊಳ್ಳಲಿದೆ.

ಕಾಸರಗೋಡಿನಲ್ಲಿ ಕಳೆದ42 ವರ್ಷಗಳಿಂದ ರಿಟೇಲ್ ಜುವೆಲ್ಲರಿ ಉದ್ಯಮದಲ್ಲಿ ಹೆಸರಾಂತ ಬ್ರಾಂಡ್ ಆಗಿರುವ ಬಿಂದು ಜುವೆಲ್ಲರಿ ಗ್ರಾಹಕರಿಗೆ ಮನಮೆಚ್ಚುವ ಅತ್ಯಾಧುನಿಕ ಶೈಲೀಯ ವಿವಿಧ ವಿನ್ಯಾಸದ ಅತ್ಯುತ್ತಮ ಶ್ರೇಣಿಯ ಸಾಂಪ್ರದಾಯಿಕ ಮತ್ತು ಅಧುನಿಕ ಆಭರಣ ಗಳನ್ನು ಒದಿಸುತ್ತ ಬಂದಿರುವ ಸಂಸ್ಥೆ ಬಿಂದು ಜುವೆಲ್ಲರಿ. ಈ ಎಲ್ಲಾ ವಿಶ್ವದೆಲ್ಲೆಡೆ ಇರುವ ಮನಮೋಹಕ ವಿನ್ಯಾಸದ ಆಭರಣಗಳು ಮತ್ತು ಸ್ಥಳೀಯವಾಗಿ ವಿನ್ಯಾಸಗೊಂಡ ಆಭರಣಗಳನ್ನು ಸುಳ್ಯದ ಜನತೆ ಆರ್ಪೀಸಲು ಸುಳ್ಯದಲ್ಲಿ ಜುವೆಲ್ಲರಿ ಆರಂಬಿಸುತ್ತಿದ್ದೇವೆ ಎಂದು ಆಡಳಿತ ಪಾಲುದಾರರಾದ ಅಬಿಲಾಷ್ ಕೆ ವಿ ಮತ್ತು ಡಾ.ಅಜಿತೇಶ್ ಕೆ ವಿ ತಿಳಿಸಿದ್ದಾರೆ