ಜಾಲ್ಸೂರು ಗ್ರಾಮದ ಮರಸಂಕ ಅಂಗನವಾಡಿ ಕೇಂದ್ರದಲ್ಲಿ ಪುಟಾಣಿ ಮಕ್ಕಳ ಬೀಳ್ಕೊಡುಗೆ ಕಾರ್ಯಕ್ರಮವನ್ನು ಎ. ೩೦ರಂದು ಏರ್ಪಡಿಸಲಾಯಿತು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ ರಚನಾ CHO, ಮೈತಡ್ಕ ಶಾಲೆಯ ಶಿಕ್ಷಕರು ಸುಪ್ರೀತ್ ಹಾಗೂ ಬಾಲವಿಕಾಸ ಸಮಿತಿಯ ಅಧ್ಯಕ್ಷರು, ಸದಸ್ಯರು ,ಪೋಷಕ ವೃಂದದವರು, ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷರು, ಸದಸ್ಯರು ,ಹಾಗೂ ಪುಟಾಣಿ ಮಕ್ಕಳು, ಸ್ಥಳೀಯರು ಉಪಸ್ಥಿತರಿದ್ದರು.
ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ಸುಪ್ರೀತ್ ಮಕ್ಕಳನ್ನು ಉದ್ದೇಶಿಸಿ ಅತಿಥಿ ಭಾಷಣವನ್ನು ಮಾಡಿದರು .ರಚನಾ ಮಕ್ಕಳಿಗೆ ಆರೋಗ್ಯ ಮಾಹಿತಿಯನ್ನು ನೀಡಿದರು.
೧ನೇ ತರಗತಿಗೆ ಹೋಗುವ ಮಕ್ಕಳ ಹಾಗೂ ಪೋಷಕರ ಕಡೆಯಿಂದ ಕಿಚನ್ ಸ್ಟೇಂಡ್ ನನ್ನು ಕೊಡುಗೆಯಾಗಿ ನೀಡಿದರು. ಎಲ್‌ಕೆಜಿ, ಯುಕೆಜಿಗೆ ಹೋಗುವ ಮಕ್ಕಳ ಹಾಗೂ ಪೋಷಕರ ಕಡೆಯಿಂದ ಚಯರ್ ಕೊಡುಗೆಯಾಗಿ ನೀಡಿದರು.
ಅಂಗನವಾಡಿ ಕಾರ್ಯಕರ್ತೆ ಕುಮಾರಿ ಕಾರ್ಯಕ್ರಮವನ್ನು ನಿರೂಪಿಸಿದರು. ಪುಟಾಣಿ ಮಕ್ಕಳು ಪ್ರಾರ್ಥನೆಯನ್ನು ಮಾಡಿದರು.