ಸುಳ್ಯ‌ ನಗರಕ್ಕೂ ಕಾಡಾನೆಗಳ ಹಿಂಡು ಎಂಟ್ರಿ

0

ಗ್ರಾಮೀಣ ಭಾಗದ ಕೃಷಿಕರ ನಿದ್ದೆ ಗೆಡಿಸಿದ್ದ ಕಾಡಾನೆಗಳ ಹಿಂಡು ಸುಳ್ಯ ನಗರಕ್ಕೂ ಎಂಟ್ರಿ ಕೊಟ್ಟಿದೆ. ನಿನ್ನೆ (ಮೇ.1) ರಾತ್ರಿ ಕೇರ್ಪಳ ಭಾಗದ ಕೃಷಿಕರ ತೋಟಕ್ಕೆ ಆನೆಗಳ ಹಿಂಡು ಬಂದು ಕೃಷಿ ತೋಟ ಹಾನಿ ಮಾಡಿರುವುದಾಗಿ ವರದಿಯಾಗಿದೆ.

ಕಾಡಿನಿಂದ ಪಯಸ್ವಿನಿ ನದಿ ದಾಟಿಕೊಂಡು ರೋಶನ್ ಕುರುಂಜಿಯವರ ತೋಟದ ಬದಿಯಿಂದಾಗಿ ಬಂದ ಕಾಡಾನೆಗಳ ಹಿಂದು ಕೇರ್ಪಳ ತೀರ್ಥರಾಮ, ಲಿಂಗಪ್ಪ ಗೌಡ, ಕರಂಬಯ್ಯ ರ ತೋಟಗಳಿಗೆ ಬಂದು ಕೃಷಿ ಹಾನಿ ಮಾಡಿದೆ. ಹಿಂಡಿನಲ್ಲಿ 9 ಆನೆಗಳು ಇತ್ತು. ಕೃಷಿ ಅಪಾರ ನಷ್ಟವಾಗಿದೆ. ಈ ಕುರಿತು ಆನೆಗಳನ್ಬು ದಟ್ಟ ಕಾಡಿಗೆ ಓಡಿಸಲು ಇಲಾಖೆ ಕ್ರಮ ಕೃಗೊಳ್ಳಬೇಕು.

ಈ ವಾರದಲ್ಲಿ ಇದು ಎರಡನೇ ಬಾರಿ ಕೃಷಿ ತೋಟಕ್ಕೆ ಆನೆಗಳು ಬರುತ್ತಿರುವುದು ಎಂದು ಸುಳ್ಯ ಸಿ.ಎ. ಬ್ಯಾಂಕ್ ನಿರ್ದೇಶಕ ಶಿವರಾಮ ಕೇರ್ಪಳ ತಿಳಿಸಿದ್ದಾರೆ.