ಕೊಡಗು ಜಿಲ್ಲೆಯ ಪೆರಾಜೆ ಗ್ರಾಮದ ಪುತ್ಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪದ್ಮಯ್ಯ ಎ.ಆರ್. ಅವರು ತಮ್ಮ 26 ವರ್ಷಗಳ ಸುದೀರ್ಘ ಶಿಕ್ಷಕ ವೃತ್ತಿಜೀವನದಿಂದ ಎ.30ರಂದು ನಿವೃತ್ತಿ ಹೊಂದಿದರು.
ಅಡ್ಕದ ದಿ. ರಾಮಣ್ಣ ಗೌಡ ಹಾಗೂ ದಿ. ದೇವಕಿ ದಂಪತಿಯ ಪುತ್ರರಾಗಿರುವ ಪದ್ಮಯ್ಯ ಗೌಡರು ಕೋಟೆ ಪೆರಾಜೆ ಸ.ಕಿ.ಪ್ರಾ.ಶಾಲೆ ಹಾಗೂ ಕುಂಬಳಚೇರಿ ಸ.ಮಾ.ಹಿ.ಪ್ರಾ. ಶಾಲೆಯಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣ ಹಾಗೂ ಸಂಪಾಜೆ ಪ್ರೌಢಶಾಲೆಯಲ್ಲಿ ತಮ್ಮ ಪ್ರೌಢಶಿಕ್ಷಣ ಪೂರೈಸಿದ್ದಾರೆ.
ಸುಳ್ಯದ ನೆಹರೂ ಸ್ಮಾರಕ ಕಾಲೇಜಿನಲ್ಲಿ ಪಿಯುಸಿ ಹಾಗೂ ಪದವಿ ಶಿಕ್ಷಣ ಪಡೆದು ಮಡಿಕೇರಿಯ ಶ್ರೀ ಸರಸ್ವತಿ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಶಿಕ್ಷಕ ತರಬೇತಿ ಪಡೆದರು.
1998ರಲ್ಲಿ ಪೆರಾಜೆ ಸ.ಮಾ. ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕ ವೃತ್ತಿ ಜೀವನ ಪ್ರಾರಂಭಿಸಿದ ಪದ್ಮಯ್ಯ ಅವರು ಒಂಭತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ, ಬಳಿಕ ಪುತ್ಯಪೆರಾಜೆ ಸ.ಕಿ.ಪ್ರಾ.ಶಾಲೆಯಲ್ಲಿ 17 ವರ್ಷಗಳ ಕಾಲ ಮುಖ್ಯೋಪಾಧ್ಯಾಯರಾಗಿ ಶಿಕ್ಷಕ ವೃತ್ತಿ ಜೀವನ ನಡೆಸಿದರು.
ಇವರ ಸೇವಾವಧಿಯಲ್ಲಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮವಹಿಸಿದ ಸಾಧನೆ ಇವರದ್ದಾಗಿದ್ದು, ಇವರ ಪತ್ನಿ ಶ್ರೀಮತಿ ಜಲಜಾಕ್ಷಿ ಎ.ಪಿ. ಅವರು ಗೃಹಿಣಿಯಾಗಿದ್ದು, ಪುತ್ರಿ ಜೀವಿತ ಎ.ಪಿ. ಬಿ.ಎಸ್ಸಿ ಡಿ.ಎಂ.ಎಲ್.ಟಿ. ಪದವಿ ಪಡೆದಿದ್ದಾರೆ. ಇನ್ನೋರ್ವ ಪುತ್ರಿ ಲಿಖಿತ ಎ.ಪಿ. ಎಂ.ಎಸ್ಸಿ ಫಾರೆನ್ಸಿಕ್ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಪುತ್ರ ವರ್ಷಿತ್ ಎ.ಪಿ. ಪ್ರಥಮ ವರ್ಷದ ಡಿಪ್ಲೊಮಾ ಕಂಪ್ಯೂಟರ್ ಸೈನ್ಸ್ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ.