ಗೂನಡ್ಕ- ಪೇರಡ್ಕ : ಶ್ರೀ ನಾಗ ಮತ್ತು ರಕ್ತೇಶ್ವರಿ ಬಂಟ ಗುಳಿಗ ಹಾಗೂ ಭೂಮಿ ಪಂಜುರ್ಲಿ ದೈವಗಳ ಪ್ರತಿಷ್ಠಾ ಕಾರ್ಯ

0

ದ.ಕ. ಸಂಪಾಜೆ ಗ್ರಾಮದ ಗೂನಡ್ಕ – ಪೇರಡ್ಕ ಶ್ರೀ ನಾಗ ಮತ್ತು ರಕ್ತೇಶ್ವರಿ ಬಂಟ ಗುಳಿಗ ಹಾಗೂ ಭೂಮಿ ಪಂಜುರ್ಲಿ ದೈವಗಳ ಸಾನಿಧ್ಯದಲ್ಲಿ ದೈವಗಳ ಪ್ರತಿಷ್ಠಾ ಕಾರ್ಯಕ್ರಮವು ಎ.25ರಿಂದ ಮೇ.3ರವರೆಗೆ ಜರುಗಿತು.

ಎ.25ರಂದು ಬೆಳಿಗ್ಗೆ ಅನುಜ್ಞಾ ಕಲಶ, ಎ.28ರಂದು ಸರ್ಪ ಸಂಸ್ಕಾರ, ಕಾರ್ಯ, ಮೇ.1ರಂದು ಬೆಳಿಗ್ಗೆ ಸರ್ಪ ಸಂಸ್ಕಾರ ಮಧ್ಯಾಹ್ನ ಅನ್ನಸಂತರ್ಪಣೆ ಜರುಗಿತು.
ಮೇ.2ರಂದು ಬೆಳಿಗ್ಗೆ ಪುಣ್ಯಾಹವಾಚನ, ಸ್ಥಳಶುದ್ಧಿ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ಪುಣ್ಯಾಹಂತ ನಂತರ ಅನ್ನಸಂತರ್ಪಣೆ ನಡೆಯಿತು.

ಮೇ.3ರಂದು ಬೆಳಿಗ್ಗೆ ಗಣಪತಿ ಹೋಮ, ಬ್ರಹ್ಮಕಲಶಪೂಜೆ, ವೃಷಭಲಗ್ನದಲ್ಲಿ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ , ಮಹಾಪೂಜೆ, ನಿತ್ಯ ನೈಮಿತ್ಯಾಧಿಗಳ ನಿರ್ಣಯ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಿತು.

ಈ ಸಂದರ್ಭದಲ್ಲಿ ದೈವಸ್ಥಾನದ ಪದಾಧಿಕಾರಿಗಳು ಸೇರಿದಂತೆ ಪೇರಡ್ಕ ಬೈಲಿನ ಸಮಸ್ತರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.