ಮೇ. 25 ರಂದು ಅಲೆಕ್ಕಾಡಿಯಲ್ಲಿ ಮಲೆನಾಡು ಗಿಡ್ಡ ಸಂರಕ್ಷಣಾ ಮತ್ತು ಸಂವರ್ಧನಾ ಅಭಿಯಾನದ ಕುರಿತು ಮಾಹಿತಿ

0


ಮೇ. 25ರಂದು ಅಲೆಕ್ಕಾಡಿಯಲ್ಲಿ ಮಲೆನಾಡು ಗಿಡ್ಡ ಸಂರಕ್ಷಣಾ ಮತ್ತು ಸಂವರ್ಧನಾ ಅಭಿಯಾನದ ಕುರಿತು ಮಾಹಿತಿ ಕಾರ್ಯಕ್ರಮ ನಡೆಯಲಿದೆ. ಅಲೆಕ್ಕಾಡಿಯಲ್ಲಿ ಮಲೆನಾಡ ಗಿಡ್ಡ ಸಂರಕ್ಷಣಾ ಮತ್ತು ಸಂವರ್ಧನಾ ಅಭಿಯಾನ ವತಿಯಿಂದ ಅಲೆಕ್ಕಾಡಿ ಅಕ್ಷಯ ಆಳ್ವರ ಮನೆಯಲ್ಲಿ ದೇಶಿಯ ತಳಿಗಳಲ್ಲಿ ಒಂದಾದ ಮಲೆನಾಡಿನ ಗಿಡ್ಡ ತಳಿಯ ದನ ಕರು ಹೋರಿ ಗಳನ್ನು ಶುದ್ಧವಾಗಿ ಮತ್ತು ಸಂವರ್ಧಿಸುವುದು ನೂರಾರು ಮನೆಗಳಿಗೆ ಪ್ರೇರಣೆ ನೀಡಿ ದನ ಸಾಕಲು ದನ ಕರು ನೀಡಿದುದಲ್ಲದೆ, ಇನ್ನು ದೇಶಿ ತಳಿ ಅಭಿವೃದ್ಧಿ ಸಲುವಾಗಿ ಈ ಕಾರ್ಯಕ್ರಮ ನಡೆಯಲಿದೆ. ತಳಿಗಳ ಮಾಹಿತಿ ಮತ್ತು ದೇಸೀ ತಳಿಯ ಹಸುಗಳ ಸಾಕಣೆ, ಅದರಿಂದ ನಮಗೆ ಸಿಗುವ ಲಾಭ, ಪ್ರಯೋಜನ ಮತ್ತು ಗೋಪೂಜೆ, ಗೋರಕ್ಷಣೆ ಮಾಡುವುದರ ಕುರಿತು ವಿವರಣೆ ನೀಡಲಿದ್ದಾರೆ.


ಮೇ. ೭ರಂದು ಅಲೆಕ್ಕಾಡಿಯ ಅಕ್ಷಯ ಆಳ್ವರವರ ಮನೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮರಿಕೆ ಎ.ಪಿ. ಸದಾಶಿವ ಭಟ್ ಈ ವಿಷಯ ತಿಳಿಸಿದರು.


ಕಾರ್ಯಕ್ರಮ ಹೇಗೆ ನಡೆಯಲಿದೆ, ಅತಿಥಿಗಳಿಂದ ದೀಪ ಪ್ರಜ್ವಲನೆ ಹಾಗೂ ಕಾರ್ಯಕ್ರಮ ಉದ್ಘಾಟನೆಯ ಬಗ್ಗೆ ಅವರು ತಿಳಿಸಿದರು. ಮರಿಕೆ ಎ.ಪಿ. ಸದಾಶಿವ ಭಟ್‌ರವರು ಅಧ್ಯಕ್ಷತೆ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಕೇಶವ ಪ್ರಸಾದ್ ಮುಳಿಯ, ಸವಣೂರು ಸೀತಾರಾಮ ರೈ, ಸಾಜ ರಾಧಾಕೃಷ್ಣ ಆಳ್ವ, ಅಶೋಕ್ ನೆಕ್ರಾಜೆ, ಅತಿಥಿಗಳಾಗಿ ಭಾಗವಹಿಸಲಿರುವರು. ಕೆ. ಪಿ. ರಮೇಶ್‌ರವರಿಂದ ಮಲೆನಾಡು ಗಿಡ್ದ ತಳಿಯ ವೈವಿಧ್ಯದ ಬಗ್ಗೆ ವಿಚಾರಗೋಷ್ಠಿ ನಡೆಯಲಿದೆ. ಮಾಹಿತಿ, ಮಲೆನಾಡು ಗಿಡ್ಡ ಹಸುವಿನ ಉತ್ನ್ನಗಳ ಔಷಧೀಯ ಗುಣಗಳ ಬಗ್ಗೆ ಪಾರಂಪರಿಕ ವೈದ್ಯರಾದ ಈಶ್ವರ್ ನಂಜನಗೂಡುರವರು ಮಾಹಿತಿ ನೀಡಲಿದ್ದಾರೆ.

ಗವ್ಯೋತ್ಪನ್ನ ತಯಾರಿಕೆ ಕುರಿತು ಅರಿವು ಕಾರ್ಯಕ್ರಮ ನಡೆಯಲಿದೆ. ನಂತರ ಅಧ್ಯಕ್ಷ ಭಾಷಣ ಪಾರಂಪರಿಕ ಚಿಕಿತ್ಸಕ ಈಶ್ವರ್ ರವರು ಉಚಿತ ವಿತರಣೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಮರಿಕೆ ಎ. ಪಿ ಸದಾಶಿವ ಭಟ್, ಪ್ರಗತಿಪರ ಕೃಷಿಕ ಎಣ್ಮೂರು ಪ್ರಸನ್ನ ಭಟ್ ಕೆ, ಕೃಷಿಕರಾದ ಪೊಳ್ಯ ನಿರಂಜನ್, ಕೃಷಿಕರಾದ ಬಾಳುಗೊಡು ಕೃಷ್ಣಪ್ರಸಾದ್, ದೇಶಿ ತಳಿ ಮುಂದಾಳು ಅಕ್ಷಯ ಆಳ್ವ ಭಾಗವಹಿಸಿದ್ದರು.