ಪಂಜ: ಅರ್ಧ ಏಕಾಹ ಭಜನೆ- ದೀಪ ಪ್ರಜ್ವಲನೆ

0

ಭಾರತ ಮೂಲ ಪರಂಪರೆ ಉಳಿಸಿ ಕೊಂಡಿದೆ-ಪ್ರಕಾಶ್ ಅಗಸ್ತ್ರಿಮಣಿ

ಮೇ.11: ಭಜನಾ ತರಬೇತಿ ಸಮಾರೋಪ ಸಮಾರಂಭ

ಶ್ರೀ ಶಾರದಾಂಬ ಭಜನಾ ಮಂಡಳಿ ಪಂಜ ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಬಿ ಸಿ ಟ್ರಸ್ಟ್, ಸುಳ್ಯ ತಾಲೂಕು, ಪಂಜ ಮತ್ತು ನಿಂತಿಕಲ್ಲು ವಲಯ ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ 15ನೇ ವರ್ಷದ ಭಜನಾ ತರಬೇತಿ ಶಿಬಿರ ನಡೆಯುತ್ತಿದ್ದು
ಮೇ.10 ರಂದು ಸಂಜೆ ಶ್ರೀ ಸತ್ಯನಾರಾಯಣ ದೇವರ ಪೂಜೆ ಹಾಗೂ ಅರ್ಧ ಏಕಾಹ ಭಜನೆ ಕಾರ್ಯಕ್ರಮಕ್ಕೆ ದೀಪ ಪ್ರಜ್ವಲನೆ ಕಾರ್ಯಕ್ರಮ ಜರುಗಿತು ಮೇ.11 ಮುಂಜಾನೆ ಗಂಟೆ 6.30 ತನಕ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ಜರುಗಲಿದೆ.

ಪಂಜ ವಲಯ ಅರಣ್ಯ ಇಲಾಖೆಯ ಉಪ ವಲಯಾರಣ್ಯಾಧಿಕಾರಿ ಪ್ರಕಾಶ್ ಅಗಸ್ತ್ರಿಮಣಿ ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ “ಭಾರತಕದಲ್ಲಿ ಪಾಶ್ಚಿಮಾತ್ಯ ದೇಶದ ದಾಳಿಯಾಗಿ ಆಳಿವಿಕೆಯಾದರು.ಭಾರತ ಮೂಲ ಪರಂಪರೆಗಳನ್ನು ಉಳಿಸಿ ಕೊಂಡಿದೆ.ಅದಕ್ಕೆ ಮುಖ್ಯ ಕಾರಣ ಇಂತಹ ಧಾರ್ಮಿಕ ಆಚರಣೆ ಹಾಗೂ ಕಾರ್ಯಕ್ರಮಗಳು”ಎಂದು ಹೇಳಿದರು.

ಸಭಾಧ್ಯಕ್ಷತೆಯನ್ನು ಭಜನೋತ್ಸವ ಸಮಿತಿ ಅಧ್ಯಕ್ಷ ರಾಜ್ ಕುಮಾರ್ ಬೇರ್ಯ ವಹಿಸಿದ್ದರು. ಭಜನೋತ್ಸವ ಸಮಿತಿ ಸಂಚಾಲಕ ಪುರುಷೋತ್ತಮ ಆಚಾರ್ಯ ನಾಗತೀರ್ಥ, ಉಪಾಧ್ಯಕ್ಷ ಹರಿಶ್ಚಂದ್ರ ಪರ್ಲ, ಕಾರ್ಯದರ್ಶಿ ದಿನೇಶ್ ಪಂಜದಬೈಲು, ಖಜಾಂಜಿ ಗೋಪಾಲಕೃಷ್ಣ ಬಳ್ಳಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಗುರು ಪ್ರಸಾದ್ ತೋಟ ಸ್ವಾಗತಿಸಿದರು. ಶ್ರೀಮತಿ ನಳಿನಿ ವಿ ಆಚಾರ್ಯ ಕಲ್ಮಡ್ಕ ನಿರೂಪಿಸಿದರು. ಮಧುಕರ ಆಚಾರ್ಯ ವಂದಿಸಿದರು.

ಮೇ.11ರಂದು ಸಂಜೆ ಗಂಟೆ 3ರಿಂದ ಸಮಾರೋಪ ಸಮಾರಂಭ ನಡೆಯಲಿದೆ. ಶ್ರೀ ಕ್ಷೇತ್ರ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ರವರು ಆಶೀರ್ವಚನ ನೀಡಲಿದ್ದಾರೆ. ಭಜನೋತ್ಸವ ಸಮಿತಿ ಅಧ್ಯಕ್ಷ ರಾಜ ಕುಮಾರ್ ಬೇರ್ಯ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ..