ಒಂದೇ ಮಳೆಗೆ ನಗರದೆಲ್ಲೆಡೆ ಕೆಸರುಮಯ, ಪಾದಾಚಾರಿಗಳಿಗೆ, ವಾಹನ ಸವಾರರಿಗೆ ಪರದಾಟ

0

ಮಣ್ಣು ಕೊಚ್ಚಿ ಹೋಗಿ ಅಪಾಯದ ಸ್ಥಿತಿಯಲ್ಲಿರುವ ನಗರದ ನೀರಿನ ಯೋಜನೆಯ ಪೈಪ್ ಜೋಡಣೆಯ ಗುಂಡಿಗಳು

ಕಳೆದ ರಾತ್ರಿ ಸುರಿದ ಮಳೆಗೆ ಸುಳ್ಯ ನಗರದೆಲ್ಲೆಡೆ ರಸ್ತೆಗಳು ಕೆಸರುಮಯಗೊಂಡಿದೆ. ಅಲ್ಲದೆ ನಗರದ ಕುಡಿಯುವ ನೀರಿನ ಯೋಜನೆಗೆ ಆರಂಭಿಸಿರುವ ಕಾಮಗಾರಿಯ ಭಾಗವಾಗಿ ಪೈಪುಗಳ ಜೋಡಣೆಗೆ ತೆಗೆದ ಗುಂಡಿಗಳಿಂದ ಮಳೆಗೆ ಮಣ್ಣುಗಳು ಕೊಚ್ಚಿ ಹೋಗಿ ಅಪಾಯದ ಸ್ಥಿತಿ ನಿರ್ಮಾಣವಾಗಿದೆ.
ಇದರಿಂದಾಗಿ ವಾಹನ ಸವಾರರು ಮತ್ತು ಪಾದಚಾರಿಗಳು ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.


ಪೈಪ್ ಅಳವಡಿಕೆಗೆ ಗುಂಡಿ ತೆಗೆಯುವ ಸಂದರ್ಭ ಕುರುಂಜಿ ಭಾಗ್ ಮೆಸ್ಕಾಂ ಇಲಾಖೆಯ ಮಾರ್ಗವಾಗಿ ಬರುವ ರಸ್ತೆಯ ಬದಿಯಲ್ಲಿ ನಗರ ಪಂಚಾಯತಿ ವತಿಯಿಂದ ಆಸಲಾಗಿದ್ದ ಇಂಟರ್ಲಾಕ್ ಗಳನ್ನು ತೆಗೆದು ಎಲ್ಲೆಂದರಲ್ಲಿ ಬಿಟ್ಟು ಹೋಗಿದ್ದು ಈ ಭಾಗವು ಮಳೆಯ ನೀರಿನ ರಭಸಕ್ಕೆ ಕೆಸರುಗದ್ದೆಯಂತಾಗಿ ಮಾರ್ಪಟ್ಟಿದೆ.
ಇದೇ ಸ್ಥಿತಿ ಜೂನಿಯರ್ ಕಾಲೇಜ್ ರಸ್ತೆಯ ಸಮೀಪವು ಕೂಡ ಕಂಡು ಬರುತ್ತಿದ್ದು ಸ್ಥಳೀಯರು ಅವಜ್ಞಾನಿಕ ಕಾಮಗಾರಿಯ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.


ಜಯನಗರ ಸರ್ಕಾರಿ ಶಾಲೆಯ ಬಳಿ ಪೈಪ್ ಅಳವಡಿಸಲು ತೆಗೆದಿರುವ ಗುಂಡಿಯ ಮಣ್ಣುಗಳು ಕೊಚ್ಚಿ ಹೋಗಿ ಬೃಹತ್ ಹೊಂಡ ನಿರ್ಮಾಣವಾಗಿದ್ದು ವಾಹನ ಸವಾರರು ಎಚ್ಚರ ತಪ್ಪಿದ್ದಲ್ಲಿ ಅಪಾಯ ಖಚಿತ ಎಂಬ ರೀತಿಯಲ್ಲಿ ಕಂಡು ಬರುತ್ತಿದ್ದೆ.


ಸಂಬಂಧಪಟ್ಟವರು ಕೂಡಲೇ ಎಚ್ಚೆತ್ತು ಅಪಾಯ ಹಾನಿಗಳು ಸಂಭವಿಸುವ ಮುನ್ನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.