ಆಲೆಟ್ಟಿ , ಬಡ್ಡಡ್ಕ : ರಸ್ತೆಗೆ ಬಾಗಿರುವ ಕಾಡು ಪೊದೆಗಳ ತೆರವು ಕಾರ್ಯ

0

ಆಲೆಟ್ಟಿಯಿಂದ ಬಡ್ಡಡ್ಕ ಕಡೆಗೆ ಸಂಚರಿಸುವ ರಸ್ತೆಗೆ ಬಾಗಿರುವ ಕಾಡು ಮುಳ್ಳಿನ ಪೊದೆಗಳನ್ನು ಕಡಿದು ತೆರವುಗೊಳಿಸುವ ಕಾರ್ಯವನ್ನು ಸ್ಥಳೀಯರಾದ ಕುಶಾಲಪ್ಪ ಮತ್ತು ರಾಜೇಶ್ ರವರ ಸಹಕಾರದೊಂದಿಗೆ ನೆರವೇರಿಸಲಾಯಿತು.


ವಾಹನ ಸವಾರರಿಗೆ ರಸ್ತೆಗೆ ಬಾಗಿದ ಮುಳ್ಳಿನ ಪೊದೆಗಳಿಂದ ತೊಂದರೆಯಾಗುತ್ತಿದ್ದುದನ್ನು ಮನಗಂಡು ಸ್ಥಳೀಯ ನಿವಾಸಿ ಎನ್.ಎ ಜ್ಞಾನೇಶ್ ರವರು ತೆರವುಗೊಳಿಸುವ ಬಗ್ಗೆ ಮುತುವರ್ಜಿ ವಹಿಸಿದ್ದರು.