ಪೆರುವಾಜೆ ವಾರ್ಡ್ 3 ರಲ್ಲಿ ನೀರಿನ ಸಮಸ್ಯೆ

0

ಪೆರುವಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ 3 ರಲ್ಲಿ ಜಲಜೀವನ್ ಯೋಜನೆ ಪೈಪು ಹಾಕದೆ ಮುರ್ಕೆತ್ತಿ, ಪೆಲತ್ತಡ್ಕ, ಆಲಂತಡ್ಕ, ನೆಲ್ಲಿಪಡ್ಪು, ಶಾಂತಿ ಮೂಲೆ ಕಡೆಗೆ ನೀರು ಸರಬರಾಜು ತೊಂದರೆ ಆಗುತ್ತಿರುವ ಬಗ್ಗೆ ಮೇ.15 ರಂದು ಖುದ್ದಾಗಿ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರುಕ್ಕು, ಜೂನಿಯರ್ ಇಂಜಿನಿಯರ್ ಜನಾರ್ದನ ಅವರ ಜೊತೆ ಮುರ್ಕೆತ್ತಿ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪರಿಶೀಲನೆ ನಡೆಸಿ ಬಜ ಟ್ಯಾಂಕ್ ಗೆ ಸಂಪರ್ಕ ಮತ್ತು ಪೆಲತ್ತಡ್ಕ ವರೆಗೆ ಹೊಸ ಪೈಪು ಲೈನ್ಸ್ ಅಳವಡಿಸುವಂತೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.


ಈ ಸಂದರ್ಭದಲ್ಲಿ ಪಂಚಾಯಿತಿ ಸದಸ್ಯರಾದ ಸಚಿನ್ ರಾಜ್ ಶೆಟ್ಟಿ, ಮಾಜಿ ಪಂಚಾಯಿತಿ ಸದಸ್ಯರಾದ ಇಬ್ರಾಹಿಂ ಅಂಬಟೆಗದ್ದೆ, ವೆಂಕಪ್ಪ ಗೌಡ ನಾರ್ಕೋಡು , ಗುತ್ತಿಗೆ ದಾರರಾದ ಸುನಿಲ್ ರೈ ಪುಡ್ಕಜೆ ಮತ್ತಿತರರು ಉಪಸ್ಥಿತರಿದ್ದರು.