ಸವಣೂರು ಶಾಲಾ ಶಿಕ್ಷಕ, ನೂಜಾಡಿ ಬ್ರಹ್ಮಶ್ರೀ ನಿಲಯದ ಬಾಲಕೃಷ್ಣ ಪೂಜಾರಿಯವರ ಮನೆಯಲ್ಲಿ ಮೇ 15ರಂದು ಹರೀಶ್ ಕಾಂತಿಯವರ ನೇತೃತ್ವದಲ್ಲಿ ಸತ್ಯನಾರಾಯಣ ದೇವರ ಪೂಜೆ ಹಾಗೂ ದುರ್ಗಾ ಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಲಾಯಿತು. ಕೇರ್ಪಡ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ವೆಂಕಪ್ಪಗೌಡ ಆಲಾಜೆ, ಹರೀಶ್ ಶಾಂತಿ, ಸುಂದರ ಕರ್ಕೇರ, ಮಾಧವ ಬಂಗೇರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಕಿ ಶ್ರೀಮತಿ ಲೀಲಾವತಿ ಮಿಲ್ಕ್ ಮಾಸ್ಟರ್, ಜಾನಪದ ಮನ್ನಣೆ ಪಡೆದ 93 ವರ್ಷ ವಯಸ್ಸಿನ ಶ್ರೀಮತಿ ಮಾನಿಗೊ ನೂಜಾಡಿ, ಎಣ್ಮೂರು ಶಾಲೆಯ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ನಂದ ಕಿಶೋರ್, ಚಾರ್ವಕ ಸಾಕ್ಷಾತ್ ಶಿವ ಭಜನಾ ಮಂಡಳಿಯ ಜಯಂತ ದಂಪತಿಗಳು, ಕೇರ್ಪಡ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಭಜನಾ ಮಂಡಳಿ ಅಧ್ಯಕ್ಷ ಸುಂದರ ಗೌಡ ಆರೆಂಬಿ, ಜಾನಪದ ವಿದ್ವಾಂಸ ಮಾಧವ ಬಂಗೇರ ದಂಪತಿಗಳು, ಅಲೆಕ್ಕಾಡಿ ಶ್ರೀ ದುರ್ಗಾ ಕ್ರಿಕೆಟರ್ಸ್ ಸಂಚಾಲಕ ಅನುರಾಜ್ ಬಿ.ಸಿ., ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಶಿಕ್ಷಕ ಬಾಲಕೃಷ್ಣ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು. ಚಾರ್ವಕ ಸಾಕ್ಷಾತ್ ಶಿವ ಭಜನಾ ಮಂಡಳಿಯ ಭಜನಾ ಕಾರ್ಯಕ್ರಮ ನಡೆಸಿ ಕೊಟ್ಟರು.